ಪಾಟ್ನಾ(ಬಿಹಾರ್): ಪಾಟ್ನಾದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ವಿರುದ್ಧದ ವ್ಯಂಗ್ಯ ಚಿತ್ರಗಳಿರೋ ಪೋಸ್ಟರ್ಗಳು ಹರಿದಾಡುತ್ತಿವೆ. ಈ ಮೂಲಕ ಬಿಹಾರದಲ್ಲಿ ಪೋಸ್ಟರ್ ವಾರ್ ಶುರುವಾಗುತ್ತಾ ಅನ್ನೋ ಅನುಮಾನಗಳು ಕಾಡುತ್ತಿವೆ.
ಅಪರಾಧಿ ಕೌನ್..?: ಲಾಲೂ ರಾಜ್ಯದಲ್ಲಿ ಪೋಸ್ಟರ್ ವಾರ್..! - ಪಾಟ್ನಾ
ವಿಧಾನಸಭಾ ಚುನಾವಣೆ ಮುಂದಿನ ಕೆಲ ತಿಂಗಳುಗಳಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ಬಿಹಾರದಲ್ಲಿ ಪೋಸ್ಟರ್ ವಾರ್ ಶುರುವಾಗಿದೆ. ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಕುಟುಂಬದ ಹಗರಣಗಳನ್ನು ಬಿಂಬಿಸುವ ಪೋಸ್ಟರ್ ಪಾಟ್ನಾದಲ್ಲಿ ಸದ್ದು ಮಾಡುತ್ತಿದೆ.
ಪೋಸ್ಟರ್‌ನಲ್ಲಿ "ಅಪರಾಧಿ ಕೌನ್..?" ಎಂಬ ಶೀರ್ಷಿಕೆಯಿದ್ದು, ಜೈಲು ಕಂಬಿಗಳ ಹಿಂದೆ ಲಾಲೂ ಪ್ರಸಾದ್ ಯಾದವ್ ಅವರಿರುವ ವ್ಯಂಗ್ಯ ಚಿತ್ರ ಬರೆಯಲಾಗಿದೆ. ಇದರ ಜೊತೆಗೆ ಲಾಲೂ ಪುತ್ರ ಹಾಗೂ ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಮತ್ತು ಲಾಲೂ ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಅವರ ವ್ಯಂಗ್ಯ ಚಿತ್ರಗಳೂ ಸಹ ಈ ಪೋಸ್ಟರ್ನಲ್ಲಿವೆ.
ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ನಡೆಯುವ ಸಾಧ್ಯತೆ ಇದ್ದು, ಈ ಪೋಸ್ಟರ್ಗಳು ತುಂಬಾನೇ ಸದ್ದು ಮಾಡುತ್ತಿವೆ. ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಕುಟುಂಬ ಮಾಡಿದ್ದ ಹಗರಣಗಳನ್ನು ಬಿಂಬಿಸುವ ಸಲುವಾಗಿ ಬೇರೆ ಪಕ್ಷದವರು ಪೋಸ್ಟರ್ ಹಾಕಿದ್ದರೆನ್ನಲಾಗಿದೆ. ಇದು ಮಾತ್ರವಲ್ಲದೇ ಬಸ್ಸೊಂದರ ಮೇಲೆ ಕೂಡಾ ಲಾಲೂ ಹಾಗೂ ಅವರ ಪುತ್ರ ತೇಜಸ್ವಿ ಯಾದವ್ ವ್ಯಂಗ್ಯ ಚಿತ್ರಗಳಿರೋ ಪೋಸ್ಟರ್ ಹಾಕಲಾಗಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹಿಂದುಳಿದ ವರ್ಗಗಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.