ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಶಾಂತಿ ಕಾಪಾಡಲು ಮನವೊಲಿಸುವಿಕೆ, ಪ್ರಾದೇಶಿಕ ಸಮಗ್ರತೆಗೆ ಭಾರತ ಬದ್ಧ: ಅನುರಾಗ್‌ ಶ್ರೀವಾತ್ಸವ

ಭಾರತ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತ ಬದ್ಧವಾಗಿದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಮನವೊಲಿಸುವಿಕೆ ಮತ್ತು ವಿಶೇಷ ಸಂಕಲ್ಪಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವತ್ಸವ ತಿಳಿಸಿದ್ದಾರೆ.

while-we-remain-convinced-of-the-need-for-maintenance-of-peace-and-tranquillity-on-border-areas-MEA Spokesperson
ಗಡಿಯಲ್ಲಿ ಶಾಂತಿ ಕಾಪಾಡಲು ಮನವೊಸುವಿಕೆ, ಪ್ರಾದೇಶಿಕ ಸಮಗ್ರತೆಗೆ ಭಾರತ ಬದ್ಧ- ಅನುರಾಗ್‌ ಶ್ರೀವಾತ್ಸವ

By

Published : Jun 19, 2020, 2:35 AM IST

ನವದೆಹಲಿ:ಪ್ರಸ್ತುತ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಮನವೊಲಿಸುವಿಕೆ ಮತ್ತು ವಿಶೇಷ ಸಂಕಲ್ಪಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವತ್ಸವ ತಿಳಿಸಿದ್ದಾರೆ.

ನಿನ್ನೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಪ್ರಧಾನಿ ನರೇಂದ್ರ ಮೋದಿ ಕೂಡ ಇದೇ ಮಾತನ್ನು ಹೇಳಿದ್ದರು. ಹೀಗಾಗಿ ಭಾರತ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತ ಬದ್ಧವಾಗಿದೆ. ಜೂನ್‌ 23 ರಂದು ನಡೆಯಲಿರುವ ರಿಕ್‌ (ರಷ್ಯಾ-ಭಾರತ-ಚೀನಾ) ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ ಎಂದು ಶ್ರೀವಾತ್ಸವ ಹೇಳಿದರು.

ಸದ್ಯಕ್ಕೆ ಇರುವ ಮಾಹಿತಿಯ ಪ್ರಕಾರ ಮಿಡತೆಗಳ ನಿರ್ವಹಣೆ ಸಂಬಂಧ ನಡೆಯಬೇಕಿದ್ದ ಭಾರತ- ಪಾಕಿಸ್ತಾನ ಮಾತುಕತೆ ರದ್ದಾಗಿದೆ ಎಂದು ಶ್ರೀವತ್ಸವ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಈ ನಡೆಯನ್ನು ನಾವು ಹಲವು ವರ್ಷಗಳಿಂದ ನೋಡುತ್ತಿದ್ದೇವೆ. ಕಳೆದ ವರ್ಷ ನಡೆದಿದ್ದ ಸಭೆಯಲ್ಲಿ ಏಷ್ಯಾ ಪೆಸಿಫಿಕ್‌ ಗುಂಪುಗೆ ಸೇರುವ ಸಂಬಂಧ ಕೊನೆಯ ಸುತ್ತಿನಲ್ಲಿ ಭಾರತದ ಪರ ಮತ ಚಲಾಯಿಸಿಲ್ಲ. ಈ ಬಗ್ಗೆ ಪಾಕ್‌ ಮಾದ್ಯಮಗಳಲ್ಲಿ ವರದಿಯಾಗಿತ್ತು ಎಂದಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ)ಯ 2021-22ರ ಅವಧಿಗೆ ಶಾಶ್ವತವಲ್ಲದ ಸದಸ್ಯರಾಗಿ ಭಾರತ ಆಯ್ಕೆಯಾಗಿದೆ. ವಿಶ್ವಸಂಸ್ಥೆಯಲ್ಲಿ ಸೌಹಾರ್ದತೆಯಿಂದ ಕೆಲಸವನ್ನು ಮಾಡುತ್ತೇವೆ. ಮಂಡಳಿಯಲ್ಲಿ ಕೆಲಸ ಮಾಡುವ ನಮ್ಮ ಶಕ್ತಿಯ ಮೇಲೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ನಂಬಿಕೆ ಇದೆ. ಹೀಗಾಗಿಯೇ ಯಾರೂ ಕೂಡ ಭಾರತಕ್ಕೆ ಸಿಕ್ಕ ಅವಕಾಶವನ್ನು ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಭದ್ರತಾ ಮಂಡಳಿಯಲ್ಲಿ ನಮ್ಮ ಭಾಗವಹಿಸುವಿಕೆ ಮತ್ತು ಕಾರ್ಯಕ್ಷಮತೆ ಮುಂದಿನ 2 ವರ್ಷಗಳಲ್ಲಿ ಜಗತ್ತಿಗೆ ಒತ್ತಿ ಹೇಳಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯುವುದನ್ನ ಪುರುಚ್ಚರಿಸುತ್ತೇವೆ ಎಂದು ಹೇಳಿದ್ದಾರೆ.

ABOUT THE AUTHOR

...view details