ಪಾಟ್ನಾ:ಯಾರಾದರೂ ಸಹೋದರ, ಸಹೋದರಿಗೆ ಮುತ್ತು ಕೊಟ್ಟರೆ ಅದು ಸೆಕ್ಸ್ ಮಾಡಿದಂತೆಯೇ? ತಾಯಿ ಮಗನಿಗೆ, ಮಗ ತಾಯಿಗೆ ಮುತ್ತು ನೀಡಿದರೆ ಅದನ್ನು ಸೆಕ್ಸ್ ಎನ್ನಲಾಗುತ್ತದೆಯೇ? ಎಂದು ಹೇಳುವ ಮೂಲಕ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಕುರಿತ ಚರ್ಚೆ ವೇಳೆ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್, ಸಂಸದೆ ರಮಾದೇವಿ ಬಗ್ಗೆ ಕೀಳುಮಟ್ಟದ ಮಾತುಗಳನ್ನಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೀತನ್ ರಾಮ್ ಮಾಂಝಿ, ಆಜಂ ಖಾನ್ ಕ್ಷಮೆ ಕೇಳಬೇಕು, ಆದರೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.