ಹೈದರಾಬಾದ್:ಪ್ರತಿಯೊಬ್ಬರೂ ಇಷ್ಟಪಡುವ ಕನಿಷ್ಠ ಬಳಕೆದಾರ ಇಂಟರ್ಫೇಸ್‌ನ ದುರ್ಬಲಗೊಳಿಸದೆ ಹೊಸ ವೈಶಿಷ್ಟ್ಯಗಳೊಂದಿಗೆ ಅಪ್ಲಿಕೇಶನ್ ರಿಫ್ರೆಶ್ ಮಾಡಲು ವಾಟ್ಸ್‌ಆ್ಯಪ್ ತೀರ್ಮಾನಿಸಿದೆ. ಇದರ ಜೊತೆಗೆ ಎಲ್ಲಾ ಬಳಕೆದಾರರಿಗೆ ಬಳಸಬಹುದಾದ ಹೊಸ ಮತ್ತು ಆಸಕ್ತಿದಾಯಕ ಫೀಚರ್‌ಗಳನ್ನು ವಾಟ್ಸ್‌ಆ್ಯಪ್ ಪರಿಚಯಿಸಿದ್ದು, ಗೂಗಲ್ ಪ್ಲೇ ಸ್ಟೋರ್ ಮೂಲಕ ಎಲ್ಲಾ ರೀತಿಯ ಬಳಕೆದಾರರು ಇವುಗಳನ್ನು ಬಳಸಬಹುದಾಗಿದೆ. ಹಾಗಾದರೆ ಇತ್ತೀಚೆಗೆ ವಾಟ್ಸ್‌ಆ್ಯಪ್ ಬಿಡುಗಡೆ ಮಾಡಿರುವ ಮತ್ತು ಮುಂದೆ ಮಾಡಲಿರುವ ಕೆಲ ಫೀಚರರ್ಸ್ ಇಲ್ಲಿವೆ ನೋಡಿ..
ನ್ಯೂ ಫಾರ್ವರ್ಡ್ ಲೇಬಲ್:
ಈ ವಾರದ ಆರಂಭದಲ್ಲಿ ವಾಟ್ಸ್‌ಆ್ಯಪ್ ಭಾರತದಲ್ಲಿ ತನ್ನ ಬಳಕೆದಾರರಿಗಾಗಿ ‘ಪದೇಪದೆ ಫಾರ್ವರ್ಡ್ ಮಾಡುವ’ ಫೀಚರ್‌ನ ಹೊರತಂದಿದೆ. ಒಂದು ಸಂದೇಶವನ್ನು ಐದಕ್ಕಿಂತ ಹೆಚ್ಚು ಸಲ ಫಾರ್ವರ್ಡ್ ಮಾಡಿದರೆ ಈ ವಿಶೇಷ ಐಕಾನ್ ಕಾಣಿಸಲಿದೆ. ಫಾರ್ವರ್ಡ್ ಮಾಡಿದ ಸಂದೇಶದ ಪಕ್ಕದಲ್ಲಿ ವಿಶೇಷ ಡಬಲ್ ಬಾಣದ ಐಕಾನ್ ಕಾಣಿಸುತ್ತದೆ. ಬಳಕೆದಾರರು ಆಗಾಗ್ಗೆ ಫಾರ್ವರ್ಡ್ ಮಾಡುವ ಸಂದೇಶಗಳನ್ನು ಇತರರಿಗೆ ಕಳುಹಿಸುವಾಗ ಅವರಿಗೂ ಇದು ಫಾರ್ವರ್ಡ್ ಸಂದೇಶ ಎಂದು ತಿಳಿಸುವುದಕ್ಕಾಗಿ ಈ ಫೀಚರ್‌ನ ಪರಿಚಯಿಸಲಾಗಿದೆ ಎಂದು ವಾಟ್ಸ್‌ಆ್ಯಪ್ ಹೇಳಿದೆ.
ಮಲ್ಟಿ ಫ್ಲಾಟ್ ಫಾರ್ಮ್ ಸಪೋರ್ಟ್:
ಮತ್ತೊಂದು ದೊಡ್ಡ ಮಟ್ಟದ ಬದಲಾವಣೆಗೆ ವಾಟ್ಸ್‌ಆ್ಯಪ್ ಸಜ್ಜಾಗಿದ್ದು, ಈ ಫೀಚರ್ ಬಳಕೆದಾರರು ತಮ್ಮ ಖಾತೆಯನ್ನು ಏಕ ಕಾಲಕ್ಕೆ ವಿವಿಧ ಡಿವಾಯ್ಸ್‌ಗಳಲ್ಲಿ ಬಳಸಲು ಅನುವು ಮಾಡಿಕೊಡಲಿದೆ. ಈ ಫೀಚರ್‌ನ ಆ್ಯಪಲ್ ಐಪ್ಯಾಡ್‌ನ ಗುರಿಯಾಗಿರಿಸಿ ಜಾರಿಗೆ ತರಲಾಗಿದೆ. ವರದಿಗಳ ಪ್ರಕಾರ, ಬಳಕೆದಾರರು ಐಒಎಸ್ ಆಧಾರಿತ ಐಪ್ಯಾಡ್‌ನಲ್ಲಿ ಮತ್ತು ಆಂಡ್ರಾಯ್ಡ್‌ನಲ್ಲಿ ಒಂದೇ ಖಾತೆಯನ್ನು ಏಕಕಾಲಕ್ಕೆ ಲಾಗ್ ಔಟ್ ಮಾಡದೆ ಬಳಸಬಹುದು. ಮತ್ತು ವಾಟ್ಸ್‌ಆ್ಯಪ್ ವೆಬ್ ಮೂಲಕ ಪಿಸಿ ಗಳಲ್ಲೂ ಬಳಸಬಹುದು.