ನವದೆಹಲಿ: ಹಲವು ದಶಕಗಳಿಂದ ಕೇಳಿಬರುತ್ತಿದ್ದ 35ಎ ವಿಧಿಯ ರದ್ದು ಮಾಡುವ ಕೂಗಿಗೆ ಮೋದಿ ಸರ್ಕಾರ ಮನ್ನಣೆ ನೀಡಿದ್ದು ಗೃಹ ಸಚಿವ ಅಮಿತ್ ಶಾ 370ನೇ ವಿಧಿಯನ್ನು ರದ್ದು ಮಾಡುವ ಶಿಫಾರಸು ಮಂಡಿಸಿ ಕಾಶ್ಮೀರದ ವಿಶೇಷ ಸ್ಥಾನಮಾನ ಇನ್ನು ಮುಂದೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರದ ಮೂಲ ನಿವಾಸಿಗಳಿಗೆ ವಿಶೇಷ ಸೌಲಭ್ಯ ಒದಗಿಸುವ 370ನೇ ವಿಧಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..
370 ರದ್ದಿಗೆ ಶಿಫಾರಸು..! ಚುನಾವಣಾ ಪ್ರಣಾಳಿಕೆ ಈಡೇರಿಸಿದ ಶಾ
ಸಂವಿಧಾನದ 370ನೇ ವಿಧಿಯನ್ವಯ ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಲಾಗಿದೆ. ಅದರಂತೆ, ಭಾರತೀಯ ಸಂವಿಧಾನದ ಎಲ್ಲಾ ವಿಚಾರಗಳು ಇತರ ರಾಜ್ಯಗಳಿಗೆ ಅನ್ವಯವಾದರೂ, ಜಮ್ಮು ಮತ್ತು ಕಾಶ್ಮೀರದ ಮಟ್ಟಿಗೆ ಆಗುವುದಿಲ್ಲ. ಭಾರತದ ಅವಿಭಾಜ್ಯ ಅಂಗ ಎಂದು ವಿಧಿಯಲ್ಲಿ ಹೇಳಿದ್ದರೂ, ಹಣಕಾಸು, ರಕ್ಷಣೆ, ವಿದೇಶಾಂಗ, ಸಂವಹನ ಹೊರತುಪಡಿಸಿ, ಉಳಿದೆಲ್ಲ ತೀರ್ಮಾನಗಳನ್ನು ಕಾಶ್ಮೀರ ಸರ್ಕಾರ ಸ್ವತಂತ್ರವಾಗಿ ಕೈಗೊಳ್ಳಬಹುದಾಗಿದೆ. ಹಾಗಾಗಿ ಇದು ಜಮ್ಮು ಕಾಶ್ಮೀರದ ಬಗ್ಗೆ ರಾಜ್ಯಪಟ್ಟಿಗೆ ಸೇರಿದ ವಿಷಯವಾಗಿದೆ.
ಐತಿಹಾಸಿಕ ಘೋಷಣೆ... ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಗೆ ಕಣಿವೆ ರಾಜ್ಯ!
- ಅಲ್ಲಿನ ಜನತೆ ಭಾರತದ ಬೇರೆ ಕಡೆಗಳಲ್ಲಿ ಆಸ್ತಿ ಖರೀದಿ ಮಾಡಬಹುದಾಗಿದ್ದು, ಬೇರೆ ರಾಜ್ಯದ ಜನರು ಕಾಶ್ಮೀರದಲ್ಲಿ ಆಸ್ತಿ ಹೊಂದುವಂತಿಲ್ಲ.
- ಕಾಶ್ಮೀರದಲ್ಲಿ ಯುದ್ಧ ಸಂದರ್ಭದ ತುರ್ತುಸ್ಥಿತಿ ಹೊರತಾಗಿ ತುರ್ತು ಪರಿಸ್ಥಿತಿ ಘೋಷಿಸುವ ಯಾವುದೇ ಹಕ್ಕನ್ನು ಕೇಂದ್ರ ಸರ್ಕಾರ ಹೊಂದಿರುವುದಿಲ್ಲ.
- ಈ ವಿಧಿಯ ಪ್ರಕಾರ ಕಾಶ್ಮೀರ ರಾಜ್ಯದ ಗಡಿಭಾಗಗಳನ್ನ ಕಡಿಮೆ ಮಾಡುವುದಾಗಲೀ ಹೆಚ್ಚಿಸುವುದಾಗಲೀ ಕೇಂದ್ರ ಸರ್ಕಾರಕ್ಕೆ ಅಧಿಕಾರ ಇರುವುದಿಲ್ಲ.
- ಸಂವಿಧಾನದ 370ನೇ ವಿಧಿ ಪ್ರಕಾರ ಜಮ್ಮು - ಕಾಶ್ಮೀರದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಲು ಬರುವುದಿಲ್ಲ.
- 370 ನೇ ವಿಧಿ ಅನ್ವಯ ಜಮ್ಮು - ಕಾಶ್ಮೀರ ಭಾರತ ಗಣತಂತ್ರದ ಅವಿಭಾಜ್ಯ ಅಂಗ
- 1949ರಲ್ಲಿ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವಂಥ ವಿಧಿಯ ರಚನೆಗೆ ಡಾ.ಅಂಬೇಡ್ಕರ್ ಜೊತೆಗೆ ಸಮಾಲೋಚನೆ ಮಾಡಬೇಕೆಂದು ಕಾಶ್ಮೀರದ ಮುಖಂಡ ಶೇಖ್ ಅಬ್ದುಲ್ಲಾ ಅವರಿಗೆ ನೆಹರೂ ಸೂಚಿಸಿದ್ದರು.
- ಭಾರತೀಯ ಸಂವಿಧಾನವನ್ನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಈ 370ನೇ ವಿಧಿಯನ್ನ ಡ್ರಾಫ್ಟ್ ಮಾಡಲು ನಿರಾಕರಿಸಿದ್ದರು.
- ಸಂವಿಧಾನದಲ್ಲಿ 370ನೇ ವಿಧಿಯನ್ನ ಕೊನೆಗೂ ರಚಿಸಿದ್ದು ಗೋಪಾಲಸ್ವಾಮಿ ಅಯ್ಯಂಗಾರ್