ಡಾರ್ಜಿಲಿಂಗ್(ಪಶ್ಚಿಮ ಬಂಗಾಳ) :ಮಾಡೆಲ್, ನಟ ಹಾಗೂ ಫಿಟ್ನೆಸ್ ಪ್ರಮೋಟರ್ ಮಿಲಿಂದ್ ಸೋಮನ್ ಇಂದು ಪತ್ನಿ ಅಂಕಿತ ಕೊನ್ವಾರ್ ಮತ್ತು ತಾಯಿ ಉಷಾ ಸೋಮನ್ ಜೊತೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದಾರೆ.
ಮಾಡೆಲ್ ಮಿಲಿಂದ್ ಸೋಮನ್ ಜೊತೆ ಕುಳಿತು ಸಂಭಾಷಣೆ ನಡೆಸುತ್ತಿರುವ ಫೋಟೋವೊಂದನ್ನು ರಾಜ್ಯಪಾಲರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಭೇಟಿಯ ಸಮಯದಲ್ಲಿ ರಾಜ್ಯಪಾಲ ಜಗದೀಪ್ ಧನಕರ್ ಅವರು ಸೋಮನ್ಗೆ ನೆನಪಿನ ಕಾಣಿಕೆಯೊಂದನ್ನು ನೀಡಿದ್ದು, ಯುವಜನರು ಸದೃಢವಾಗಿರಲು ನೀವೊಂದು ದೊಡ್ಡ ಪ್ರೇರಣೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.