ಕರ್ನಾಟಕ

karnataka

ETV Bharat / bharat

ಬುಧವಾರದ ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ನಿರುತ್ಸಾಹದಿಂದ ಕೂಡಿರುತ್ತದೆ

ಬುಧವಾರದ ನಿಮ್ಮ ದಿನ ಭವಿಷ್ಯ ಇಂತಿದೆ...

ಬುಧವಾರದ ದಿನ ಭವಿಷ್ಯ

By

Published : Sep 11, 2019, 9:33 AM IST

ಮೇಷ: ನೀವು ನಿಮ್ಮ ಕೆಲಸದಲ್ಲಿ ಮತ್ತು ಸಾಮಾಜಿಕ ಬದ್ಧತೆಗಳಲ್ಲಿ ಅತಿಯಾದ ಒತ್ತಡದಲ್ಲಿದ್ದೀರಿ. ನೀವು ಬಿಡುವು ತೆಗೆದುಕೊಂಡು ಸಂತೋಷಪಡುವ ಮತ್ತು ನಿಮಗಾಗಿ ಕೊಂಚ ಏನಾದರೂ ಮಾಡುವ ಸಮಯ.

ವೃಷಭ:ಇಂದು ನಿಮ್ಮ ಗೋಜಲುಗಳಿಂದ ಬಿಡಿಸಿಕೊಂಡು ಹೊರಹೋಗುವ ದಿನ. ನೀವು ಇತರರ ಕೆಲಸಕ್ಕೆ ಆಕ್ಷೇಪಣೆಗೆ ಒಳಗಾಗುತ್ತೀರಿ. ಮಧ್ಯಾಹ್ನದ ವೇಳೆಗೆ ವಿಷಯಗಳು ಆಶಾಭಂಗ ತರಬಹುದು, ಮತ್ತು ನಿಮ್ಮ ವಿಶ್ವಾಸದ ಮಟ್ಟ ಕುಸಿಯಬಹುದು. ನಿಮ್ಮ ಶಕ್ತಿಯ ಮೇಲೆ ಕೆಲಸ ಮಾಡಿ ನಿಮ್ಮ ದೌರ್ಬಲ್ಯವನ್ನು ನಿವಾರಿಸಿ.

ಮಿಥುನ: ನೀವು ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿಯ ವಿಷಯಗಳ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇಂದು ನೀವು ಕೊಂಚ ಅವಿಶ್ರಾಂತರಾಗುತ್ತೀರಿ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮನಸ್ಸು ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ರಿಸ್ಕ್ ತೆಗೆದುಕೊಳ್ಳಬಹುದು.

ಕರ್ಕಾಟಕ:ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನಿಮ್ಮ ಮನರಂಜನೆಯಿಂದ ಅವರನ್ನು ತೊಡಗಿಸಿಕೊಳ್ಳುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಲಾಭ ತರುತ್ತವೆ. ವಿದ್ಯಾರ್ಥಿಗಳು ನಿರೀಕ್ಷೆ ಮೀರುತ್ತಾರೆ ತಮ್ಮಕೆಲಸಕ್ಕೆ ಗಮನ ನೀಡುತ್ತಾರೆ ಮತ್ತು ಗಮನ ನೀಡುತ್ತಾರೆ. ಒಟ್ಟಾರೆ ಎಲ್ಲರಿಗೂ ಇದು ಒಳ್ಳೆಯ ದಿನವಾಗಿದೆ.

ಸಿಂಹ:ನೀವು ಒತ್ತಡದ ಕಾರ್ಯಗಳನ್ನು ಪ್ರಭಾವಿಸಲು ಯತ್ನಿಸುತ್ತಿರುವುದರಿಂದ ಕೊಂಚ ಒತ್ತಡ ಅನುಭವಿಸುತ್ತೀರಿ. ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಸೌಖ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ, ಆದರೆ ಎಲ್ಲ ಕೆಲಸ ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳ ಮತ್ತು ವಿಶ್ರಾಂತಿಗೆ ದಾರಿಗಳನ್ನು ಹುಡುಕಿರಿ.

ಕನ್ಯಾ:ಆರೋಗ್ಯದ ವಿಷಯಕ್ಕೆ ಬಂದರೆ ನಿರ್ಲಕ್ಷ್ಯ ಅಥವಾ ಮುಂದೂಡಿಕೆ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದೀರಿ. ಆದರೆ, ಶಾಂತಿ ಮತ್ತು ಸಮೃದ್ಧಿ ದಿನದ ವಿಶೇಷತೆಗಳು. ನೀವು ಇಂದು ವಿನೋದ ಮತ್ತು ಮನರಂಜನೆಯಲ್ಲಿ ಸಮಯ ಖರ್ಚು ಮಾಡಿ- ಕೇವಲ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಎಂದು ತಿಳಿಯಿರಿ.

ತುಲಾ:ನಿಮ್ಮ ಶ್ರಮಶೀಲ ಸ್ವಭಾವವು ನಿಮ್ಮ ಆತ್ಮಸಾಕ್ಷಿಯ ಮಾತು ಕೇಳುವ ಸಮಯವೊಂದಿದ್ದರೆ, ಅದು ಇಂದು ಹೊಸ ವ್ಯಾಪಾರದ ಸಾಹಸಗಳನ್ನು ಮಾಡಲು ಮುಖ್ಯವಾಗಿ ಫ್ರೀಲಾನ್ಸರ್ ಗಳಿಗೆ ಇದು ಸಕಾರಾತ್ಮಕ ದಿನವಾಗಿದೆ. ನೀವು ನಿಮ್ಮ ಆಂತರಿಕ ಧ್ವನಿಯ ಮಾತು ಕೇಳಿದರೆ ಮತ್ತು ಉತ್ಸಾಹದಿಂದ ಬೆಂಬಲಿಸಿದರೆ ತಪ್ಪಾಗುವುದು ಕಷ್ಟಸಾಧ್ಯ. ಬೆಳಗಿನ ಕಠಿಣ ಪರಿಶ್ರಮ ಮತ್ತು ಮಧ್ಯಾಹ್ನದ ಒತ್ತಡ ಸಂಜೆಯ ಸಂತೋಷಕ್ಕೆ ದಾರಿ ನೀಡುತ್ತವೆ. ನೀವೇನು ಮಾಡುತ್ತೀರೋ ಅದನ್ನು ಆನಂದಿಸಿ.

ವೃಶ್ಚಿಕ:ಇದು ವ್ಯಾಪಾರಕ್ಕೆ ಸೂಕ್ತ ಸಮಯ, ಮತ್ತು ನೀವು ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ನಿಮ್ಮ ಪ್ರತಿಸ್ಪರ್ಧಿಗಳಿಗೆ ಶಾಕ್ ನೀಡುತ್ತೀರಿ. ಆದರೆ, ತಾರೆಗಳು ಅನುಕೂಲಕರ ರೀತಿಯಲ್ಲಿ ಜೋಡಣೆಯಾಗಿಲ್ಲ, ಅವು ಕೆಲ ಅಡೆತಡೆಗಳನ್ನು ಉಂಟು ಮಾಡಬಹುದು ಎಂದು ಸೂಚಿಸುತ್ತಿವೆ. ಎಷ್ಟು ಸಾಧ್ಯವೋ ಅಷ್ಟು ಸಮಯ ತೆಗೆದುಕೊಳ್ಳಿ, ಅನಾನುಕೂಲ ಪರಿಹರಿಸಿಕೊಳ್ಳಿ ಮತ್ತು ಜಾಹೀರಾತು ಮತ್ತು ಸಂಭ್ರಮಾಚರಣೆಗಳ ಮೂಲಕ ನಿಮ್ಮ ಉತ್ಪನ್ನ ಬಿಡುಗಡೆ ಮಾಡಿ.

ಧನು:ನಿಮ್ಮ ಒಳಗಿರುವ ಋಷಿ ಇಂದು ನಾಯಕತ್ವ ವಹಿಸುತ್ತಾನೆ. ನೀವು ಮನಃಶಾಂತಿಗೆ ನಿಮ್ಮದೇ ಔಷಧ ಸೂಚಿಸಿಕೊಳ್ಳಲಿದ್ದೀರಿ. ನೀವು ಇಂದು ಜ್ಞಾನಿ ಮತ್ತು ಸಂತೃಪ್ತರು, ನಿಮ್ಮ ಸುತ್ತಲೂ ಜನರಿಗೆ ಅದೇ ಸಂದೇಶ ಹರಡುತ್ತೀರಿ.

ಮಕರ:ನಿಮ್ಮ ಅಸಾಧಾರಣ ಬೌದ್ಧಿಕ ಸಾಮರ್ಥ್ಯ ನಿಮಗೆ ಉತ್ಸಾಹಕರ ಫಲಿತಾಂಶಗಳನ್ನು ನೀಡುವುದೇ ಅಲ್ಲದೆ ನಿಮ್ಮ ಹತ್ತಿರದ ಮಿತ್ರರಿಗೆ ಮತ್ತು ಸಹ-ಕೆಲಸಗಾರರಿಗೆ ನಿಮ್ಮ ಮೌಲಿಕ ಸಲಹೆಯಿಂದ ಅವರ ವೃತ್ತಿಯಲ್ಲಿ ಮಹತ್ತರವಾಗಿ ಪ್ರಗತಿ ಕಾಣಲು ನೆರವಾಗುತ್ತದೆ. ಅಸಂಖ್ಯ ಸಮಸ್ಯೆಗಳು ನಿಮ್ಮ ದಾರಿಯಲ್ಲಿ ಬರಬಹುದು, ಆದರೆ ಒತ್ತಡಕ್ಕೆ ಕಾರಣವಿಲ್ಲ.

ಕುಂಭ:ಕೆಲಸದಲ್ಲಿ ಇಂದು ಒತ್ತಡದ ದಿನ, ಮತ್ತು ನೀವು ಕೆಲ ಬಾಕಿ ಇರುವ ಪ್ರಾಜೆಕ್ಟ್ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆದರೆ ಸಂತೃಪ್ತರಾಗದಿರಿ. ನಿಮ್ಮ ವಿರೋಧಿಗಳ ಶಕ್ತಿಯ ಮೇಲೆ ಕಣ್ಣಿರಿಸಿ. ಸಹೋದ್ಯೋಗಿಗಳು ಮತ್ತು ಕುಟುಂಬ ಬೆಂಬಲ ನೀಡುತ್ತದೆ.

ಮೀನ: ನೆರೆಹೊರೆಯವರನ್ನು ಪ್ರೀತಿಸಿ’ ಎನ್ನುವ ಆಜ್ಞೆಯನ್ನು ನೀವು ಅನುಷ್ಠಾನಗೊಳಿಸುತ್ತೀರಿ, ಇದು ಧರ್ಮಗ್ರಂಥಗಳು ಇಂದು ನಿಮಗೆ ಚಿಂತನೆ ಪ್ರಭಾವಿಸುತ್ತವೆ ಎನ್ನುವುದನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಆಸಕ್ತಿಗಳು ನಿಮ್ಮನ್ನು ಸಕ್ರಿಯಾಗಿರಿಸುತ್ತವೆ. ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು.

ABOUT THE AUTHOR

...view details