ಪೂಂಚ್: ಪಾಕಿಸ್ತಾನ ಆಗಾಗ್ಗೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದು ನಮ್ಮ ಜೀವನವನ್ನು ಶೋಚನೀಯಗೊಳಿಸಿದೆ ಎಂದು ಪೂಂಚ್‌ನ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಇರುವ ಹಳ್ಳಿಗಳ ಜನರು ಆರೋಪಿಸಿದ್ದಾರೆ.
ಕಳೆದ ತಿಂಗಳು ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ನನ್ನ ಕುಟುಂಬದ ಮೂವರು ಮೃತಪಟ್ಟರು. ಘಟನೆ ನಡೆದ 5 ರಿಂದ 7 ನಿಮಿಷಗಳಲ್ಲೆ ಆಗಮಿಸಿದ ಸೇನೆ ನಮ್ಮವರನ್ನು ಆಸ್ಪತ್ರೆಗೆ ಸಾಗಿಸಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ನಮ್ಮ ಸೈನ್ಯವನ್ನು ಎದುರಿಸಲು ಧೈರ್ಯವಿಲ್ಲದ ಕಾರಣ ಪಾಕಿಸ್ತಾನ ಸೇನೆ, ಮುಗ್ಧ ಜನರನ್ನು ಕೊಲ್ಲುತ್ತಿದೆ. ನಮ್ಮ ಕಷ್ಟದ ಸಮಯದಲ್ಲಿ ಭಾರತೀಯ ಸೇನೆ ಯಾವಾಗಲೂ ನಮ್ಮ ನೆರವಿಗೆ ನಿಂತಿದೆ ಎಂದು ಸ್ಥಳೀಯ ನಿವಾಸಿ ಸಾದಿಕ್ ಹೇಳಿದ್ದಾರೆ.
ಆಗಸ್ಟ್ 10 ರಂದು ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ, ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ನಡೆಸಿತು.
ಇದಕ್ಕೂ ಮುನ್ನ ಆಗಸ್ಟ್ 9 ರಂದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಶಹಪುರ್, ಕಿರ್ನಿ ಮತ್ತು ಕೃಷ್ಣ ಘಾಟಿ ವಲಯಗಳಲ್ಲಿ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ಮತ್ತು ಶೆಲ್ ದಾಳಿ ಮಾಡುವ ಮೂಲಕ ಕದನ ವಿರಾಮ ಉಲ್ಲಂಘನೆಗೆ ಮಾಡಿದೆ. ಎರಡೂ ಸಂದರ್ಭಗಳಲ್ಲಿ ಭಾರತೀಯ ಸೇನೆಯು ಸೂಕ್ತ ಉತ್ತರ ನೀಡಿದೆ.