ಕರ್ನಾಟಕ

karnataka

ETV Bharat / bharat

ಪುಣೆಯಲ್ಲಿ ಕೊರೊನಾ ವ್ಯಾಕ್ಸಿನ್​ ಟ್ರಯಲ್​:​ ಲಸಿಕೆ ಪಡೆದವರ ಆರೋಗ್ಯ ಸ್ಥಿರವಾಗಿದೆ ಎಂದ ವೈದ್ಯರು!

ಸೇರಮ್ ಸಂಸ್ಥೆಯಲ್ಲಿ ತಯಾರಾಗುವ ಆಕ್ಸ್‌ಫರ್ಡ್‌ ಸಂಶೋಧಿಸಿರುವ ಕೋವಿಶೀಲ್ಡ್‌ ಲಸಿಕೆಯ ಎರಡನೇ ಹಂತದ ಪ್ರಯೋಗ ಪ್ರಾರಂಭಿಸಲಾಗಿದ್ದು, ಭಾರ್ತಿ ವಿದ್ಯಾ ಪೀಠದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಬ್ಬರು ಪುರುಷ ಸ್ವಯಂಸೇವಕರಿಗೆ ಲಸಿಕೆ ನೀಡಲಾಗಿದೆ.

ಕೊರೊನಾ ವ್ಯಾಕ್ಸಿನ್​ ಪ್ರಯೋಗ
ಕೊರೊನಾ ವ್ಯಾಕ್ಸಿನ್​ ಪ್ರಯೋಗ

By

Published : Aug 27, 2020, 12:58 PM IST

ಪುಣೆ (ಮಹಾರಾಷ್ಟ್ರ):ಇಲ್ಲಿನಸೇರಮ್ ಸಂಸ್ಥೆಯಲ್ಲಿ ತಯಾರಾಗುವ ಆಕ್ಸ್‌ಫರ್ಡ್‌ ಸಂಶೋಧಿಸಿರುವ ಕೋವಿಶೀಲ್ಡ್‌ ಲಸಿಕೆಯ ಎರಡನೇ ಹಂತದ ಪ್ರಯೋಗ ಆಗಸ್ಟ್​ 26ರಂದು ಪ್ರಾರಂಭಿಸಲಾಗಿದೆ. ಲಸಿಕೆ ಪಡೆದ ಇಬ್ಬರು ಸ್ವಯಂಸೇವಕರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಅಡ್ಡ ಪರಿಣಾಮ ಬೀರಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಭಾರ್ತಿ ವಿದ್ಯಾ ಪೀಠದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಬ್ಬರು ಪುರುಷ ಸ್ವಯಂಸೇವಕರಿಗೆ ಲಸಿಕೆ ನೀಡಲಾಗಿದೆ. ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಸಿಕೆಯ ಪ್ರಯೋಗ ಪ್ರಾರಂಭವಾಗಿದೆ ಎಂದು ಭಾರ್ತಿ ವಿದ್ಯಾಪೀಠ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಸಂಜಯ್‌ ಲಾಲ್ವಾನಿ ಹೇಳಿದ್ದಾರೆ.

32 ವರ್ಷ ಹಾಗೂ 48 ವರ್ಷದ ವ್ಯಕ್ತಿಗಳಿಗೆ ಆಕ್ಸ್‌ಫರ್ಡ್‌ ಲಸಿಕೆಯನ್ನು ನೀಡಲಾಗಿದೆ. 32 ವರ್ಷದ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, 48 ವರ್ಷದ ವ್ಯಕ್ತಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಲಸಿಕೆ ನೀಡುವುದಕ್ಕಿಂತ ಮುಂಚೆ ಅವರ ಉಷ್ಣಾಂಶ, ರಕ್ತದೊತ್ತಡ ಹಾಗೂ ಹೃದಯ ಬಡಿತವನ್ನು ಪರಿಶೀಲನೆ ನಡೆಸಲಾಗಿದೆ. ಪುಣೆಯ ಸೇರಮ್‌ ಸಂಸ್ಥೆಯಲ್ಲಿ ನಡೆಯುವ ಕೋವಿಶೀಲ್ಡ್‌ ಕ್ಲಿನಿಕಲ್‌ ಪ್ರಯೋಗ ಪ್ರಾರಂಭವಾದ ನಂತರ ಐವರು ಸ್ವಯಂಸೇವಕರು ನೋಂದಾಯಿಸಿಕೊಂಡಿದ್ದರು. ಆದರೆ ಕೊರೊನಾ ವೈರಸ್ ಪರೀಕ್ಷೆ ನಡೆಸಿದಾಗ ಮೂವರಲ್ಲಿ ಪಾಸಿಟಿವ್‌ ವರದಿ ಬಂದಿದೆ.

ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸೇರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಬ್ರಿಟಿಷ್-ಸ್ವೀಡಿಷ್ ಔಷಧ ಕಂಪನಿ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಸಂಭಾವ್ಯ ಲಸಿಕೆಯನ್ನು ತಯಾರಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಲಸಿಕೆ ನೀಡಿದ ಬಳಿಕ ಅರ್ಧ ಗಂಟೆಯವರೆಗೆ ಇಬ್ಬರು ಸ್ವಯಂಸೇವಕರ ಜೀವಕೋಶಗಳನ್ನು ಗಮನಿಸಲಾಗಿದೆ ಎಂದು ಅವರು ಹೇಳಿದರು.

ಒಂದು ತಿಂಗಳ ನಂತರ ಇಬ್ಬರು ಸ್ವಯಂಸೇವಕರ ಮೇಲೆ ಲಸಿಕೆಯನ್ನು ಮತ್ತೊಂದು ಬಾರಿ ಪ್ರಯೋಗಿಸಲಾಗುವುದು. ಬಳಿಕ ಲಸಿಕೆಯನ್ನು ನೀಡಿದ ಸ್ವಯಂಸೇವಕರಲ್ಲಿ ಲಸಿಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಿದೆ ಎಂಬುದನ್ನು ತಿಳಿದುಕೊಳ್ಳಲಾಗುವುದು. ಎರಡನೇ ಹಂತದ ಕ್ಲಿನಿಕಲ್‌ ಟ್ರಯಲ್‌ಅನ್ನು ದೇಶಾದ್ಯಂತ ಹಲವು ಕಡೆ ಪ್ರಾರಂಭಿಸಲಾಗಿದೆ. 100 ಸ್ವಯಂಸೇವಕರ ಮೇಲೆ ಲಸಿಕೆಯ ಪ್ರಯೋಗವನ್ನು ನಡೆಸಲಾಗುವುದು ಎಂದು ಲಲ್ವಾನಿ ಹೇಳಿದ್ದಾರೆ.

ABOUT THE AUTHOR

...view details