ಸರ್ಹಾನ್ಪುರ್(ಉತ್ತರಪ್ರದೇಶ): ಮನೆಯಲ್ಲಿದ್ದ ವೇಳೆ ಲೈಂಗಿಕ ದೌರ್ಜನ್ಯವೆಸಗಲು ಬಂದ ಕಾಮುಕನ ಮರ್ಮಾಂಗವನ್ನೇ ಮಹಿಳೆಯೊಬ್ಬರು ಕತ್ತರಿಸಿದ ಘಟನೆ ಉತ್ತರಪ್ರದೇಶದ ಸಹ್ರಾನ್‌ಪುರದಲ್ಲಿ ನಡೆದಿದೆ.
ಲೈಂಗಿಕ ದೌರ್ಜನ್ಯವೆಸಗಲು ಬಂದ ಕಾಮುಕನ__ಕತ್ತರಿಸಿದ ಮಹಿಳೆ! - ಲೈಂಗಿಕ ದೌರ್ಜನ್ಯ
ಲೈಂಗಿಕ ದೌರ್ಜನ್ಯವೆಸಗಲು ಬಂದ ಕಾಮುಕನಿಗೆ ಮಹಿಳೆ ತಕ್ಕ ಪಾಠ ಕಲಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಬಗ್ಗೆ ಮಾಹಿತಿ ಪಡೆದ ನೆರೆ ಮನೆಯ ವ್ಯಕ್ತಿ ದುಷ್ಕೃತ್ಯವೆಸಗಲು ಮುಂದಾಗಿದ್ದ. ಈ ವೇಳೆ ಪ್ರಾಣ ರಕ್ಷಣೆಯ ಉದ್ದೇಶದಿಂದ ಕೈಯಲ್ಲಿ ಚಾಕು ಆಕೆ ಹಿಡಿದು ಹೆದರಿಸುವ ಪ್ರಯತ್ನ ಮಾಡಿದ್ದಾಳೆ. ಇಷ್ಟಕ್ಕೂ ಸುಮ್ಮನಾಗದ ವ್ಯಕ್ತಿ ಅಶ್ಲೀಲ ಪದಬಳಕೆ ಮಾಡಿ ಮೈಮೇಲೆಗಲು ಬಂದಿದ್ದಾನೆ. ಈ ಸಂದರ್ಭದಲ್ಲಿ ಅನ್ಯ ದಾರಿ ತೋಚದ ಮಹಿಳೆ ಆತನ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿದ್ದಾಳೆ. ದೇಹದ ಪ್ರಮುಖ ಅಂಗ ಕಳೆದುಕೊಂಡ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಸದ್ಯ ಆತನನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮಿರ್ಜಾಪೂರ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಎಸ್ಎಸ್ಪಿ ದಿನೇಶ್ ಕುಮಾರ್ ಪ್ರಭು ತಿಳಿಸಿದ್ದಾರೆ.