ಕರ್ನಾಟಕ

karnataka

ETV Bharat / bharat

'ಉಪವಾಸ ಕುಳಿತ ಮಹಿಳೆಯರ ಸಂಕಷ್ಟಕ್ಕೆ ಬರದ ಕೇಂದ್ರದಿಂದ 'ಸೆಲ್ಯೂಟ್​'ಗೆ ಸಮರ್ಥನೆ ಏನು?'

ದೇಶದೆಲ್ಲೆಡೆ ಕೊರೊನಾ ವಾರಿಯರ್ಸ್​ಗೆ ಭಾರತೀಯ ಸೇನೆಯ ಪರವಾಗಿ ಗೌರವ ಸಲ್ಲಿಸಲಾಗುತ್ತಿದೆ. ಇದಕ್ಕೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Akhilesh yadav
ಅಖಿಲೇಶ್​ ಯಾದವ್​

By

Published : May 3, 2020, 2:33 PM IST

ಲಖ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಲವಾರು ಕೊರೊನಾ ಕ್ವಾರಂಟೈನ್ ಕೇಂದ್ರಗಳಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ಇನ್ನೂ ಕೆಲವು ಕಡೆಗಳಲ್ಲಿ ಮಹಿಳೆಯರು ಉಪವಾಸ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಕೊರೊನಾ ವಾರಿಯರ್ಸ್​ ಮೇಲೆ ಹೂಗಳನ್ನು ಸುರಿಸಿ ಗೌರವ ಸಲ್ಲಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರದ ಸಮರ್ಥನೆ ಏನು ಎಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಒಂದು ಟ್ವೀಟ್​ನಲ್ಲಿ ಸೇನೆಯಿಂದ ಕೊರೊನಾ ವಾರಿಯರ್ಸ್​ಗೆ ಗೌರವ ಸಲ್ಲಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಅಖಿಲೇಶ್​ ಮತ್ತೊಂದು ಟ್ವೀಟ್​ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್​ನಿಂದ ನೂರು ರೂಪಾಯಿಗಳನ್ನು ಕೊರೊನಾ ನಿಧಿಗೆ ನೀಡುವಂತೆ ಕೇಳಲಾಗುತ್ತಿದೆ. ಈಗಾಗಲೇ ಭಾವನಾತ್ಮಕವಾಗಿ ಜನರನ್ನು ಮರುಳು ಮಾಡಿ ಹಣವನ್ನು ಪಡೆಯಲಾಗುತ್ತಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ.

ದೇಶದೆಲ್ಲೆಡೆ ಕೊರೊನಾ ವಾರಿಯರ್ಸ್​ಗೆ ಭಾರತೀಯ ಸೇನೆಯ ಪರವಾಗಿ ಗೌರವ ಸಲ್ಲಿಸಲಾಗುತ್ತಿದೆ. ದೇಶದ ಪ್ರಮುಖ ನಗರದಲ್ಲಿ ಸೇನೆಯ ಮೂರು ವಿಭಾಗಗಳಿಂದ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರಿಗೆ ಗೌರವ ಸಲ್ಲಿಸಲಾಗಿದೆ.

ABOUT THE AUTHOR

...view details