ನವದೆಹಲಿ: ಪುಲ್ವಾಮಾ ದಾಳಿಯ ರೂವಾರಿ ಜೈಷ್ ಮೊಹಮ್ಮದ್ ಉಗ್ರ ಸಂಘಟನೆಯನ್ನು ನಿಷೇಧಿತ ಲಿಸ್ಟ್ಗೆ ಸೇರಿಸಲು ಭಾರತಕ್ಕೆ ವಿಶ್ವದ ಅಗ್ರ ಮೂರು ರಾಷ್ಟ್ರಗಳು ಬೆಂಬಲ ಸೂಚಿಸಿವೆ.
ಜೈಷ್ ಮೊಹಮ್ಮದ್ ನಿಷೇಧಿಸಲು ಭಾರತಕ್ಕೆ ಅಗ್ರ ರಾಷ್ಟ್ರಗಳ ಬೆಂಬಲ
ಫ್ರಾನ್ಸ್ ಮೊದಲಿಗೆ ವಿಶ್ವಸಂಸ್ಥೆಯಲ್ಲಿ ಜೈಷ್ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಲು ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಿತ್ತು. ಇದಾದ ಒಂದು ಬಳಿಕ ಅಂದರೆ ಬುಧವಾರ ಮತ್ತೆರಡು ಬಲಿಷ್ಠ ರಾಷ್ಟ್ರಗಳು ಫ್ರಾನ್ಸ್ ಜೊತೆಗೆ ಕೈ ಜೋಡಿಸಿವೆ.
ಜೈಷ್ ಮೊಹಮ್ಮದ್
ಯುನೈಟೆಡ್ ಕಿಂಗ್ಡಮ್ ಹಾಗೂ ಅಮೆರಿಕಾ ಸಹ ಜೈಷ್ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ.
ಮೂಲಗಳ ಪ್ರಕಾರ ಕೆಲವೇ ದಿನಗಳಲ್ಲಿ ಈ ಮೂರೂ ರಾಷ್ಟ್ರಗಳು ಮನವಿಯನ್ನು ಸಲ್ಲಿಸಲಿವೆ ಎನ್ನಲಾಗಿದೆ. 2016 ಹಾಗೂ 2017ರಲ್ಲಿ ಸಹ ಜೈಷ್ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಲು ಈ ರಾಷ್ಟ್ರಗಳು ಮನವಿ ಮಾಡಿದ್ದವು.