ಕರ್ನಾಟಕ

karnataka

ETV Bharat / bharat

ಬಲಗೊಂಡ ಭಾರತದೊಂದಿಗಿನ ಸಂಬಂಧ: ಎಫ್​-18 ಯುದ್ಧ ವಿಮಾನ ನೀಡಲು ಮುಂದಾದ ಅಮೆರಿಕ - ಭಾರತ ಅಮೆರಿಕ ರಕ್ಷಣಾ ಒಪ್ಪಂದ

ಭಾರತ ಹಾಗೂ ಅಮೆರಿಕ ಸಂಬಂಧ ಮತ್ತಷ್ಟು ಸುಧಾರಿಸುತ್ತಿದ್ದು, ತನ್ನ ಎಫ್-18 ಯುದ್ಧ ವಿಮಾನವನ್ನು ನೀಡಲು ಅಮೆರಿಕ ಮುಂದಾಗಿದೆ.

F-18
ಎಫ್- 18

By

Published : Oct 28, 2020, 3:31 PM IST

ನವದೆಹಲಿ:ಭಾರತದೊಂದಿಗೆ ಅಮೆರಿಕದ ಸಂಬಂಧ ದಿನೇ ದಿನೇ ಉತ್ತಮಗೊಳ್ಳುತ್ತಿದ್ದು, ಈಗ ನೌಕಾಪಡೆಯ ಅವಶ್ಯಕತೆಗಾಗಿ ತನ್ನ ಎಫ್- 18 ಫೈಟರ್​​ಜೆಟ್​​ ಅನ್ನು ಭಾರತಕ್ಕೆ ನೀಡಲು ಮುಂದಾಗಿದೆ.

ಕೆಲವು ವರ್ಷಗಳ ಹಿಂದೆ 57 ನೌಕಾ ಫೈಟರ್ ಜೆಟ್​ಗಳನ್ನು ಕೊಳ್ಳಲು ಭಾರತ ಆಸಕ್ತಿ ತೋರಿತ್ತು. ಈ ಫೈಟರ್​ ಜೆಟ್​​ಗಳು ಐಎನ್​ಎಸ್​ ವಿಕ್ರಮಾದಿತ್ಯ ಹಾಗೂ ದೇಶೀಯವಾಗಿ ನಿರ್ಮಾಣವಾಗುತ್ತಿದ್ದ ವಿಮಾನ ವಾಹಕ ನೌಕೆಯಲ್ಲಿ ಕೆಲಸ ಮಾಡಲು ಅವಶ್ಯಕತೆ ಇತ್ತು.

2+2 ಸಭೆಗಳಲ್ಲಿ ನಡೆದ ಒಪ್ಪಂದದ ಪ್ರಸ್ತಾವನೆಯಡಿಯಲ್ಲಿ ಅಮೆರಿಕ ಸರ್ಕಾರವು ತಮ್ಮ ನೌಕಾ ಯುದ್ಧ ವಿಮಾನ ಎಫ್ -18 ಅನ್ನು ಭಾರತೀಯ ನೌಕಾಪಡೆಗೆ ನೀಡಲು ಮುಂದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಮೆರಿಕ ತನ್ನ ಎಫ್ -18 ಫೈಟರ್​​ ಜೆಟ್​ ಮತ್ತು ಮಾನವರಹಿತ ವಿಮಾನ ಸೀ ಗಾರ್ಡಿಯನ್ ಜೊತೆಗೆ ಹಲವಾರು ವ್ಯವಸ್ಥೆಗಳನ್ನು ಹೊಂದಿರುವ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಸ್ಪಷ್ಟನೆ ನೀಡಿವೆ.

ಅಮೆರಿಕ ನೀಡಲಿರುವ ಯುದ್ಧ ವಿಮಾನವು ಭಾರತ ಆಸಕ್ತಿ ವ್ಯಕ್ತಪಡಿಸಿದ್ದ 126 ಮಲ್ಟಿರೋಲ್ ಮೀಡಿಯಮ್ ಕಂಬ್ಯಾಟ್ ಏರ್​ಕ್ರಾಫ್ಟ್​ ಆಗಿದ್ದ ವಿಮಾನದ ಸುಧಾರಿತ ಆವೃತ್ತಿಯಾಗಿದ್ದು, ಈ ಯುದ್ಧ ವಿಮಾನಕ್ಕೆ ರಫೇಲ್ ಹಾಗೂ ಯೂರೋಪಿಯನ್ ಯೂರೋಫೈಟರ್​ಗಳಲ್ಲಿ ಮಾತ್ರ ಈ ತಂತ್ರಜ್ಞಾನವಿದೆ.

ಈ ಯುದ್ಧ ವಿಮಾನ ಭಾರತಕ್ಕೆ ಬಂದ ನಂತರ ನೌಕಾಪಡೆ ಹಾಗೂ ವಾಯುಪಡೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ರಫೇಲ್ ಹಾಗೂ ಎಫ್​​-18 ವಿಮಾನಗಳು ವಾಯುಪಡೆಗೆ ಮತ್ತಷ್ಟು ಬಲ ತುಂಬಲಿವೆ.

ABOUT THE AUTHOR

...view details