ಕರ್ನಾಟಕ

karnataka

ETV Bharat / bharat

ಮಗಳ ಮೇಲೆ ಎರಡು ವರ್ಷ ಅತ್ಯಾಚಾರ! ಕೊನೆಗೆ ಕೊಲೆಗೈದು ವಿಕೃತಿ ಮೆರೆದ ಕಾಮುಕ ತಂದೆ - ಗೋರಖ್‌ಪುರ

ಕಳೆದೆರಡು ವರ್ಷಗಳಿಂದ ಮಗಳ ಮೇಲೆ ಅತ್ಯಾಚಾರಗೈದಿರುವ ಕಾಮುಕ ತಂದೆ ಕೊನೆಗೆ ಆಕೆಯ ತಲೆ ಕಡಿದು ಕೊಲೆ ಮಾಡಿರುವ ಘೋರ ಘಟನೆ ಉತ್ತರಪ್ರದೇಶದ ಗೋರಖ್​​ಪುರದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Aug 17, 2019, 11:35 PM IST

ಗೋರಖ್‌ಪುರ:19 ವರ್ಷದ ಮಗಳ ಮೇಲೆಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವ ಕಾಮುಕ ತಂದೆ ಕೊನೆಗೆ ಆಕೆಯ ತಲೆ ಕಡಿದು ಕೊಲೆ ಮಾಡಿರುವ ಹೇಯ ಘಟನೆ ಉತ್ತರಪ್ರದೇಶದ ಗೋರಖ್​ಪುರ್​ದಲ್ಲಿ ನಡೆದಿದೆ.

ಕಳೆದ ಎರಡು ವರ್ಷಗಳಲ್ಲಿ ಆಕೆಯ ಮೇಲೆ ಸತತವಾಗಿ ಅತ್ಯಾಚಾರವೆಸಗಿರುವ ಪಾಪಿ ತಂದೆ, ಜುಲೈ 26ರಂದು ಆಕೆಯ ರುಂಡ ಕಡಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನ ಛಿದ್ರ ಛಿದ್ರಗೊಳಿಸಿ ಒಳಚರಂಡಿಯಲ್ಲಿ ಬಿಸಾಡಿದ್ದಾನೆ. ಪ್ರಕರಣ ವಿಚಾರಣೆ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್​ ಗುಪ್ತಾ ಎದುರು ಆರೋಪಿ ತನ್ನ ಕುಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಅತ್ಯಾಚಾರಕ್ಕೊಳಗಾದ ಯುವತಿ ತನ್ನ ತಂಗಿಯೊಂದಿಗೆ ವಾಸವಾಗಿದ್ದು, ಇವರ ಜತೆಗಿದ್ದ ತಂದೆ ದೊಡ್ಡ ಮಗಳನ್ನು ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಮಗಳು ವಿರೋಧ ವ್ಯಕ್ತಪಡಿಸಿ ತಂದೆಯ ಬಳಿ ವಾಗ್ವಾದಕ್ಕಿಳಿದಾಗ ಆಕೆಯನ್ನು ಕೊಲೆ ಮಾಡಿದ್ದಾನೆ. ತನ್ನ ಸಹೋದರಿಯ ಬಗ್ಗೆ ಕಿರಿ ಮಗಳು ತಂದೆಯ ಬಳಿ ವಿಚಾರಿಸಿದಾಗ ಆಕೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಇದೇ ವಿಷಯವನ್ನು ಆಕೆ ಪೊಲೀಸರಿಗೂ ತಿಳಿಸಿದ್ದಾಳೆ. ಆರೋಪಿಯ ಪತ್ನಿ ಕಳೆದ 15 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

ಈಗಾಗಲೇ ಮೃತದೇಹದ ಭಾಗಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಆರೋಪಿಯ ಬಂಧನವಾಗಿದ್ದು, ತನಿಖೆ ಮುಂದವರೆದಿದೆ.

ABOUT THE AUTHOR

...view details