ಕರ್ನಾಟಕ

karnataka

ETV Bharat / bharat

ರಾಜ್ಯಾದ್ಯಂತ 218 'ಫಾಸ್ಟ್​ ಟ್ರಾಕ್​ ಕೋರ್ಟ್'​ಗಳನ್ನು ಸ್ಥಾಪಿಸಲು ಯುಪಿ ಸರ್ಕಾರ ನಿರ್ಧಾರ

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಾವಿನ ಬಳಿಕ ಎಚ್ಚೆತ್ತಿರುವ ಉತ್ತರ ಪ್ರದೇಶ ಸರ್ಕಾರ, ಮಹಿಳೆ ಹಾಗೂ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ರಾಜ್ಯಾದ್ಯಂತ 218 'ಫಾಸ್ಟ್​ ಟ್ರಾಕ್​ ಕೋರ್ಟ್'​ಗಳನ್ನು ಸ್ಥಾಪಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ.

ಯೋಗಿ ಆದಿತ್ಯನಾಥ್, yogi adityanath
ಯೋಗಿ ಆದಿತ್ಯನಾಥ್

By

Published : Dec 10, 2019, 9:39 AM IST

ಲಖನೌ(ಉತ್ತರ ಪ್ರದೇಶ): ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಸಾವಿನ ಬಳಿಕ ಎಚ್ಚೆತ್ತಿರುವ ಉತ್ತರ ಪ್ರದೇಶ ಸರ್ಕಾರ, ಮಹಿಳೆ ಹಾಗೂ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ರಾಜ್ಯಾದ್ಯಂತ 218 'ಫಾಸ್ಟ್​ ಟ್ರಾಕ್​ ಕೋರ್ಟ್'​ಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಇದರೊಂದಿಗೆ 32 ಇತರ ಪ್ರಸ್ತಾವನೆಗಳೂ ಸಭೆಯಲ್ಲಿ ಚರ್ಚೆಗೆ ಬಂದಿದೆ.

ಸಂಪುಟ ಸಭೆಯ ಬಳಿಕ ಮಾತನಾಡಿದ ರಾಜ್ಯ ಕಾನೂನು ಸಚಿವ ಬ್ರಜೇಶ್​ ಪಾಠಕ್​​, ಮಹಿಳೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳು ಮಾತ್ರವೇ ಈ ಕೋರ್ಟ್​ಗಳಲ್ಲಿ ವಿಚಾರಣೆಯಾಗಲಿದೆ. 218 ಕೋರ್ಟ್​ಗಳಲ್ಲಿ 144 ಕೋರ್ಟ್​ಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆಯಾಗುತ್ತದೆ. ಉಳಿದಂತೆ 74 ನ್ಯಾಯಾಲಯಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ. ಒಂದು ಕೋರ್ಟ್​ ನಿರ್ಮಾಣದ ಅಂದಾಜು ವೆಚ್ಚ ಸುಮಾರು 75 ಲಕ್ಷ ರೂಪಾಯಿ ಎಂದು ಬ್ರಜೇಶ್​ ತಿಳಿಸಿದ್ದಾರೆ.

ಉನ್ನಾವೋದಲ್ಲಿ ಅತ್ಯಾಚಾರ ಸಂತ್ರಸ್ಥೆಯು ಕೋರ್ಟ್​ಗೆ ಹೋಗುತ್ತಿದ್ದಾಗ, ಅತ್ಯಾಚಾರ ಆರೋಪಿಗಳು ಆಕೆಗೆ ಬೆಂಕಿ ಹಚ್ಚಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಸಂತ್ರಸ್ತೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಅಲ್ಲದೇ ಉನ್ನಾವೋದಲ್ಲಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದ ಕಾರಣದಿಂದಾಗಿ, ಜಿಲ್ಲೆ ದೇಶದ ಅತ್ಯಾಚಾರಗಳ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಯ್ತು. ಈ ಬಳಿಕ ಎಚ್ಚೆತ್ತ ಯುಪಿ ಸರ್ಕಾರ ತ್ವರಿತ ನ್ಯಾಯಕ್ಕಾಗಿ 218 'ಫಾಸ್ಟ್​ ಟ್ರಾಕ್​ ಕೋರ್ಟ್'​ಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

ABOUT THE AUTHOR

...view details