ಲಖನೌ(ಉತ್ತರ ಪ್ರದೇಶ): ಇಂದು ದೇಶದೆಲ್ಲೆಡೆ ಮಹಾತ್ಮ ಗಾಂಧಿ ಜಯಂತಿಯ ಸಂಭ್ರಮ ಮನೆಮಾಡಿದ್ದು, ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಉತ್ತರ ಪ್ರದೇಶ ಸರ್ಕಾರ ಗಾಂಧೀಜಿಗೆ ವಿಶೇಷವಾಗಿ ಗೌರವ ಸಲ್ಲಿಸುತ್ತಿದೆ.
ಸತತ 36 ಗಂಟೆಗಳ ಕಾಲ ಅಧಿವೇಶನ.. ಮಹಾತ್ಮನಿಗೆ ಯುಪಿ ವಿಶೇಷ ಗೌರವ! - ಮಹಾತ್ಮ ಗಾಂಧಿ
ಗಾಂಧಿ ಜಯಂತಿ ನಿಮಿತ್ತ ಉತ್ತರ ಪ್ರದೇಶ ಸರ್ಕಾರ 36 ಗಂಟೆಗಳ ಕಾಲ ವಿಶೇಷ ಅಧಿವೇಶನ ನಡೆಸಲಿದೆ.
ವಿಶೇಷ ಅಧಿವೇಶನ
ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನದ ಉತ್ತರ ಪ್ರದೇಶ ಸರ್ಕಾರ ವಿಶೆಷ ವಿಧಾನ ಸಭೆ ಅಧಿವೇಶನ ನಡೆಸಲಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಅಧಿವೇಶನ ಸತತ 36 ಗಂಟೆಗಳ ಕಾಲ ನಡೆಯಲಿದೆ. ಈ ಅಧಿವೇಶನದಲ್ಲಿ ವಿಶ್ವಸಂಸ್ಥೆಯು ಅಂಗೀಕರಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಕುರಿತು ಚರ್ಚೆ ನಡೆಸಲಾಗುತ್ತದೆ.
ಗಾಂಧಿ ಜಯಂತಿ ನಿಮಿತ್ತ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ ಸೇರಿದಂತೆ ವಿವಿದ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.
Last Updated : Oct 2, 2019, 12:40 PM IST