ಹೈದರಾಬಾದ್:ಕೆಲ ಕಿಡಿಗೇಡಿಗಳ ವಿವಾಹಿತ ಮಹಿಳೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಆಕೆಯ ವೇದನೆ ನೋಡಿದ ಕುಟುಂಬಸ್ಥರು ಸೈಬರಾಬಾದ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಇಲ್ಲಿನ ಮಿಯಾಪುರ್ ನಿವಾಸಿಯ ವ್ಯಕ್ತಿಯ ಪತ್ನಿಗೆ ಅಪರಿಚಿತರು 3 ಸಾವಿರಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಡಿಸೆಂಬರ್ 15ರಂದು ಎರಡೂ ಫೋನ್ಗಳಿಂದ ಕರೆ ಮಾಡಿದ ಅವರು ಮಹಿಳೆಯೊಬ್ಬಳು ವಿವಾಹಿತೆಗೆ ವ್ಯಭಿಚಾರ ಮಾಡುವಂತೆ ಪ್ರೇರೇಪಿಸಿದ್ದಾಳೆ.
ಮಹಿಳೆ ಬೆದರಿಕೆ ನಂತರ ಅಪರಿಚಿತರಿಂದ ಕರೆಗಳು ಬರುತ್ತಲೇ ಇವೆ. ವಾಟ್ಸಾಪ್ನಲ್ಲಿ ಅಶ್ಲೀಲ ವಿಡಿಯೋಗಳು, ಕರೆ ಮಾಡಿ ಅಸಭ್ಯವಾಗಿ ಮಾತನಾಡುವ ಪ್ರವೃತ್ತಿ ನಿರಂತರವಾಗಿ ನಡೆಯುತ್ತಿದೆ. ಇಷ್ಟಕ್ಕೆ ಮುಗಿಯಲಿಲ್ಲ ಈ ಕಿಡಿಗೇಡಿಗಳ ಅಟ್ಟಹಾಸ. ‘ಜೆಕೆ123’ ಅಂತ ವಾಟ್ಸಾಪ್ ಗ್ರೂಪ್ ಮಾಡಿ ಅದರಲ್ಲಿ ವಿವಾಹಿತೆಯ ಅಶ್ಲೀಲ ಫೋಟೋಗಳನ್ನು ಹರಿಬಿಡುತ್ತಿದ್ದಾರೆ ದುಷ್ಕರ್ಮಿಗಳು!
ಇದರಿಂದಾಗಿ ಈ ವಿವಾಹಿತೆ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿದ್ದಳು. ಆಕೆಯ ಪರಿಸ್ಥಿತಿ ನೋಡಿದ ಕುಟುಂಬಸ್ಥರು ಸಾಕಷ್ಟು ವೇದನೆ ಅನುಭವಿಸುತ್ತಿದ್ದಾರೆ. ಸಹೋದರಿಯ ಕಷ್ಟ ಅರಿತ ಸಹೋದರ ಇದೀಗ ಸೈಬರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.