ಕರ್ನಾಟಕ

karnataka

ETV Bharat / bharat

ಪುಲ್ವಾಮಾದಲ್ಲಿ ಪ್ರಚಾರವೇ ಸವಾಲು... ಯೋಧರ ರಕ್ತ ಹರಿದ ನೆಲದಲ್ಲಿ ಸೂತಕದ ಛಾಯೆ - ಪ್ರಚಾರ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆ. 14 ರಂದು ಉಗ್ರರ ಅಟ್ಟಹಾಸದಿಂದ 44 ಯೋಧರು ಹುತಾತ್ಮರಾಗಿದ್ದರು. ಅನಂತನಾಗ್​ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ರಾಜಕೀಯ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.

ಪುಲ್ವಾಮದಲ್ಲಿ ನೀರಸ ಚುನಾವಣೆ

By

Published : Apr 7, 2019, 11:13 AM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಪೈಶಾಚಿಕ ಘಟನೆಗೆ ಸಾಕ್ಷಿಯಾದ ಪ್ರದೇಶ. ಉಗ್ರನ ದಾಳಿಗೆ 44 ಯೋಧರ ರಕ್ತ ಹರಿದ ನೆಲದಲ್ಲಿ ಇನ್ನೂ ಸೂತಕದ ಛಾಯೆ ಇದೆ. ದೇಶದೆಲ್ಲೆಡೆ ರಂಗೇರಿರುವ ಲೋಕಸಭೆ ಚುನಾವಣೆ ಇಲ್ಲಿ ಮಾತ್ರ ನೀರಸವಾಗಿದೆ.

ಅನಂತನಾಗ್ ಲೋಕಸಭೆ ಕ್ಷೇತ್ರದಲ್ಲಿ ಬರುವ ನಾಲ್ಕು ಜಿಲ್ಲೆಗಳಲ್ಲಿ ಪುಲ್ವಾಮಾ ಸಹ ಒಂದು. ಮೇ 6ರಂದು ಪುಲ್ವಾಮಾದಲ್ಲಿ ಚುನಾವಣೆ ನಡೆಯಲಿದೆ. ಆದರೆ ಈವರೆಗೆ ಯಾವ ಪಕ್ಷದವರೂ ಇಲ್ಲಿ ಪ್ರಚಾರ ಕೈಗೊಳ್ಳಲು ಧೈರ್ಯ ಮಾಡಿಲ್ಲ. ಗನ್​ ನೆರಳಲ್ಲಿ ಪ್ರಚಾರದಂತಹ ಸಾಹಸ ಮಾಡುವುದು ರಾಜಕೀಯ ನಾಯಕರಿಗೆ ಸವಾಲಾಗಿದೆ.

ಇನ್ನು ಉಗ್ರರ ಹಲವು ದಾಳಿಗಳನ್ನು ಎದುರಿಸಿಯೂ ಕ್ಷೇತ್ರ ಬಿಟ್ಟು ತೆರಳಿ ಮಾಜಿ ಶಾಸಕ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಗುಲಾಂ ಮೊಹಿಯುದ್ದೀನ್​ ಮಿರ್​ ಇಲ್ಲಿನ ಪ್ರಮುಖ ರಾಜಕಾರಣಿಯಾಗಿದ್ದಾರೆ. ಎರಡು ವರ್ಷಗಳಲ್ಲಿ ತಮ್ಮ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕಳೆದುಕೊಂಡಿದ್ದಾರೆ. ಎಷ್ಟೆಲ್ಲಾ ದಾಳಿಗಳಾದರೂ ತಾನು ಇಲ್ಲಿಯೇ ಇದ್ದು, ಜನರ ಸಂಪರ್ಕದಲ್ಲಿರುವೆ ಎಂದು ಹೇಳಿಕೊಂಡಿದ್ದಾರೆ.

ಅನಂತನಾಗ್​ನಲ್ಲಿ ಮಾತ್ರ ಬೃಹತ್ ಸಭೆ ಆಯೋಜಿಸುತ್ತಿರುವ ಕಾಂಗ್ರೆಸ್​, ಜಮ್ಮು ಮತ್ತು ಕಾಶ್ಮೀರದ ಕಲಂ 35 (ಎ)ಗೆ ಬದ್ಧವಿರುವುದಾಗಿ ಹೇಳಿಕೊಂಡಿದೆ.

ಆದರೆ ಮೃತ ಉಗ್ರನ ತಂದೆ ಮೊಹಮ್ಮದ್​​ ಮಕ್ಬೂಲ್​, ಕಾಶ್ಮೀರದ ಸಮಸ್ಯೆಗಳನ್ನು ರಾಜಕಾರಣಿಗಳು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಸುಶಿಕ್ಷಿತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಕಾರ್ಮಿಕರು, ಜನರು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ರಾಜಕೀಯ ನಾಯಕರ ಬಗ್ಗೆ ಜನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಚುನಾವಣೆ ವೇಳೆ ಭರವಸೆ ನೀಡುವವರು ಗೆದ್ದ ನಂತರ ಈಡೇರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪುಲ್ವಾಮಾ ದಾಳಿಯಿಂದ ರಾಜಕಾರಣಿಗಳು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಚುನಾವಣೆಗೆ ಸಮರ್ಥ ಭದ್ರತಾ ವ್ಯವಸ್ಥೆ ಸಹ ಸವಾಲಾಗಿ ಪರಿಣಮಿಸಿದೆ.

ABOUT THE AUTHOR

...view details