ನ್ಯೂಯಾರ್ಕ್/ಜಿನೀವಾ: ವಿಶ್ವದ ಮೂರನೇ ಎರಡರಷ್ಟು ಶಾಲಾ ವಯಸ್ಸಿನ (3 ರಿಂದ 17 ವರ್ಷ) 1.3 ಬಿಲಿಯನ್ ಮಕ್ಕಳು ತಮ್ಮ ಮನೆಗಳಲ್ಲಿ ಇಂಟರ್ನೆಟ್ಸಂಪರ್ಕ ಹೊಂದಿಲ್ಲ ಎಂದು ಯುನಿಸೆಫ್ ಮತ್ತು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) ತನ್ನ ಜಂಟಿ ವರದಿಯಲ್ಲಿ ತಿಳಿಸಿದೆ.
ಮನೆಯಲ್ಲಿ ಎಷ್ಟು ಮಕ್ಕಳು ಮತ್ತು ಯುವಕರು ಇಂಟರ್ನೆಟ್ ಸೌಲಭ್ಯ ಹೊಂದಿದ್ದಾರೆ ಎಂಬ ವರದಿಯಲ್ಲಿ 15-24 ವರ್ಷ ವಯಸ್ಸಿನ ಯುವಕರಲ್ಲಿ 759 ಮಿಲಿಯನ್ ಅಥವಾ ಶೇ.63 ರಷ್ಟು ಮನೆಯಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲ. ಅನೇಕ ಮಕ್ಕಳು ಮತ್ತು ಯುವಕರಿಗೆ ಮನೆಯಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿರುವುದು ಡಿಜಿಟಲ್ ಅಂತರ ಹೆಚ್ಚಾಗಿದೆ ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ತಿಳಿಸಿದ್ದಾರೆ.
ಇಂಟರ್ನೆಟ್ ಸಂಪರ್ಕದ ಕೊರತೆಯು ಮಕ್ಕಳು ಮತ್ತು ಯುವ ಜನರು ಆನ್‌ಲೈನ್‌ನಲ್ಲಿ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಮಿತಿಗೊಳಿಸುವುದಿಲ್ಲ. ಇದು ಆಧುನಿಕ ಆರ್ಥಿಕತೆಯಲ್ಲಿ ಸ್ಪರ್ಧಿಸುವುದನ್ನು ತಡೆಯುತ್ತದೆ. ಅಲ್ಲದೇ ಅವರನ್ನು ಪ್ರಪಂಚದಿಂದ ಪ್ರತ್ಯೇಕಿಸುತ್ತದೆ. ಕೋವಿಡ್ 19 ಕಾರಣದಿಂದಾಗಿ ಪ್ರಸ್ತುತ ಲಕ್ಷಾಂತರ ಶಾಲಾ - ಕಾಲೇಜುಗಳು ಮುಚ್ಚಿವೆ. ಈ ಸಂದರ್ಭದಲ್ಲಿ ಅದು ಶಿಕ್ಷಣದಿಂದ ವಂಚಿತರಾಗಲು ಕಾರಣವಾಗುತ್ತದೆ.
ಕೋವಿಡ್ 19ನಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ವಿಶ್ವಾದ್ಯಂತ ಸುಮಾರು ಒಂದು ಶತಕೋಟಿ ವಿದ್ಯಾರ್ಥಿಗಳು ಶಿಕ್ಷಣದಿದಂದ ವಂಚಿತರಾಗುತ್ತಿದ್ದಾರೆ. ನೂರಾರು ಮಿಲಿಯನ್ ವಿದ್ಯಾರ್ಥಿಗಳು ವರ್ಚುಯಲ್ ಕಲಿಕೆಯನ್ನು ಅವಲಂಬಿಸುವಂತೆ ಒತ್ತಾಯಿಸಿದ್ದಾರೆ. ಇಂಟರ್ನೆಟ್ ಸಂಪರ್ಕವಿಲ್ಲದವರಿಗೆ ಶಿಕ್ಷಣವು ತಲುಪಲು ಸಾಧ್ಯವಿಲ್ಲ. ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ, 21ನೇ ಶತಮಾನದ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಯುವ ಸಮೂಹವು ವರ್ಗಾವಣೆ ಮಾಡಬಹುದಾದ, ಡಿಜಿಟಲ್, ಉದ್ಯೋಗ ಮತ್ತು ಉದ್ಯಮಶೀಲತಾ ಕೌಶಲ್ಯಗಳನ್ನು ಕಲಿಯಬೇಕಾಗಿತ್ತು. ಡಿಜಿಟಲ್ ವಿಭಜನೆಯು ಈಗಾಗಲೇ ದೇಶಗಳು ಮತ್ತು ಸಮುದಾಯಗಳನ್ನು ವಿಭಜಿಸುವ ಅಸಮಾನತೆಗಳನ್ನು ಶಾಶ್ವತಗೊಳಿಸುತ್ತಿದೆ ಎಂದು ವರದಿ ತಿಳಿಸಿದೆ.
ಜಾಗತಿಕವಾಗಿ ಶ್ರೀಮಂತ ಕುಟುಂಬಗಳ ಶಾಲಾ - ವಯಸ್ಸಿನ ಮಕ್ಕಳಲ್ಲಿ ಶೇ. 58ರಷ್ಟು ಜನರು ಮನೆಯಲ್ಲಿ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದಾರೆ. ಆದರೆ, ಬಡ ಕುಟುಂಬಗಳಿಂದ ಕೇವಲ ಶೇ. 16ರಷ್ಟು ಮಾತ್ರ. ದೇಶದ ಆದಾಯ ಮಟ್ಟದಲ್ಲೂ ಇದೇ ಅಸಮಾನತೆಯಿದೆ. ಕಡಿಮೆ ಆದಾಯದ ದೇಶಗಳ ಶಾಲಾ - ವಯಸ್ಸಿನ 20 ಮಕ್ಕಳಲ್ಲಿ 1ಕ್ಕಿಂತ ಕಡಿಮೆ ಮಕ್ಕಳು ಮನೆಯಲ್ಲಿ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೆ, ಹೆಚ್ಚಿನ ಆದಾಯದ ದೇಶಗಳ 10ರಲ್ಲಿ 9 ಮಕ್ಕಳು ಇಂಟರ್ನೆಟ್ ಸಂಪರ್ಕ ಹೊಂದಿದ್ದಾರೆ. ಗ್ರಾಮೀಣ ಜನಸಂಖ್ಯೆಯನ್ನು ಸಂಪರ್ಕಿಸುವುದು ಅಸಾಧಾರಣ ಸವಾಲಾಗಿ ಉಳಿದಿದೆ ಎಂದು ಐಟಿಯು ಪ್ರಧಾನ ಕಾರ್ಯದರ್ಶಿ ಹೌಲಿನ್ ಝಾವೋ ಹೇಳಿದರು.
ಐಟಿಯು ವರದಿಯಂತೆ ಅಂಕಿ ಅಂಶ 2020ರ ಪ್ರಕಾರ ಗ್ರಾಮೀಣ ಪ್ರದೇಶಗಳ ಹೆಚ್ಚಿನ ಭಾಗಗಳು ಮೊಬೈಲ್ - ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್‌ನಿಂದ ಆವರಿಸಲ್ಪಟ್ಟಿಲ್ಲ. ಮತ್ತು ಕಡಿಮೆ ಗ್ರಾಮೀಣ ಕುಟುಂಬಗಳಿಗೆ ಇಂಟರ್ನೆಟ್ ಸಂಪರ್ಕವಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವೆ ಮೊಬೈಲ್ ಬ್ರಾಡ್‌ಬ್ಯಾಂಡ್ ಅಳವಡಿಕೆ ಮತ್ತು ಇಂಟರ್ನೆಟ್ ಬಳಕೆಯ ಅಂತರವು ವಿಶೇಷವಾಗಿದೆ. ಕಡಿಮೆ ಆದಾಯದ ದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಿಂದ ಬಂದ ಸುಮಾರು 1.3 ಶತಕೋಟಿ ಶಾಲಾ-ವಯಸ್ಸಿನ ಮಕ್ಕಳು ತಮ್ಮ ಶಿಕ್ಷಣವನ್ನು ಕಳೆದುಕೊಳ್ಳುವ ಅಪಾಯವಿದೆ. ಏಕೆಂದರೆ ಅವರಿಗೆ ಮನೆಯಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆಯಿದೆ.
ದೇಶಗಳಲ್ಲಿ ಮತ್ತು ಪ್ರದೇಶಗಳಲ್ಲಿ ಭೌಗೋಳಿಕ ಅಸಮಾನತೆಗಳಿವೆ. ಜಾಗತಿಕವಾಗಿ, ನಗರ ಪ್ರದೇಶಗಳಲ್ಲಿನ ಶೇ.60 ರಷ್ಟು ಶಾಲಾ ವಯಸ್ಸಿನ ಮಕ್ಕಳಿಗೆ ಮನೆಯಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲ. ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಶಾಲಾ - ವಯಸ್ಸಿನ ಮಕ್ಕಳು ಹೆಚ್ಚು ಬಾಧಿತರಾಗಿದ್ದು, ಸುಮಾರು 10 ಮಕ್ಕಳಲ್ಲಿ 9 ಮಕ್ಕಳು ಇಂಟರ್ನೆಟ್ ಸಂಪರ್ಕ ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.