ಚೆನ್ನೈ: ಮಿಥೇನಾಲ್ ಕುಡಿದ ಮತ್ತಿಬ್ಬರು ಮೃತಪಟ್ಟ ಘಟನೆ ತಮಿಳುನಾಡಿನ ಕಡ್ಡಲೋರ್ ಜಿಲ್ಲೆಯಲ್ಲಿ ನಡೆದಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರಾಯಿ ಸಿಗದಿದ್ದಕ್ಕೆ ವಿಷಪೂರಿತ ಸಾರಾಯಿ ಮಿಥೇನಾಲ್ ಕುಡಿದು ಅಸ್ವಸ್ಥರಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸಿಗದ ಮದ್ಯ: ಮಿಥೇನಾಲ್ ಕುಡಿದ ಇಬ್ಬರ ಸಾವು - ಕಡ್ಡಲೋರ್ ಜಿಲ್ಲೆ
ಮದ್ಯದಂಗಡಿಗಳು ಬಂದ್ ಆಗಿರುವ ಕಾರಣದಿಂದ ಕಳ್ಳಬಟ್ಟಿ ಮೊರೆ ಹೋಗುತ್ತಿರುವ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ. ವಿಷಪೂರಿತ ಕಳ್ಳಬಟ್ಟಿ ಕುಡಿದು ಮೂವರು ಸಾವಿಗೀಡಾಗಿರುವ ಘಟನೆ ತಮಿಳುನಾಡಿ ಕಡ್ಡಲೋರ್ ಜಿಲ್ಲೆಯಲ್ಲಿ ನಡೆದಿದೆ.
Two Tamil Nadu alcoholics die after drinking methanol
ಕಡ್ಡಲೋರ್ ಜಿಲ್ಲೆಯಲ್ಲಿ ರವಿವಾರ ರಾತ್ರಿ ಮಿಥೇನಾಲ್ ಕುಡಿದು ಅಸ್ವಸ್ಥರಾಗಿದ್ದ ಐವರನ್ನು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀರಾ ಗಂಭೀರವಾಗಿದ್ದ ಓರ್ವ ವ್ಯಕ್ತಿ ಮಂಗಳವಾರವೇ ಕೊನೆಯುಸಿರೆಳೆದಿದ್ದ. ಈಗ ಮತ್ತಿಬ್ಬರ ಸಾವಿನಿಂದ ಈ ಪ್ರಕರಣದಲ್ಲಿ ಒಟ್ಟು ಸಾವಿನ ಸಂಖ್ಯೆ ಮೂರಕ್ಕೇರಿದೆ.
ಲಾಕ್ಡೌನ್ನಿಂದಾಗಿ ಎಲ್ಲೂ ಸಾರಾಯಿ ಸಿಗದೇ ಕುಡುಕರು ಕಳ್ಳಬಟ್ಟಿ ಸಾರಾಯಿಯ ಮೊರೆ ಹೋಗುತ್ತಿರುವುದರಿಂದ ಇಂಥ ದುರ್ಘಟನೆಗಳು ಸಂಭವಿಸುತ್ತಿವೆ ಎನ್ನಲಾಗಿದೆ.