ಇಂದೋರ್(ಮಧ್ಯಪ್ರದೇಶ):ಸೆಲ್ಫಿ ತೆಗೆದುಕೊಳ್ಳುವ ಉದ್ದೇಶದಿಂದ ನದಿಗೆ ಇಳಿದ ವೇಳೆ ಏಕಾಏಕಿ ಪ್ರವಾಹ ಉಕ್ಕಿ ಬಂದಿರುವ ಕಾರಣ ಇಬ್ಬರು ಯುವತಿಯರು ನದಿಯಲ್ಲಿ ಸಿಲುಕಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಹದಲ್ಲಿ ಸಿಲುಕಿದ ಯುವತಿಯರು... ಹರಸಾಹಸ ಪಟ್ಟು ರಕ್ಷಿಸಿದ ಪೊಲೀಸ್!
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ಯುವತಿಯರು ನದಿಯಲ್ಲಿ ಸಿಲುಕಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಕೊನೆಗೂ ಹರಸಾಹಸ ಪಟ್ಟು ಅವರ ರಕ್ಷಣೆ ಮಾಡಲಾಗಿದೆ.
ಮಧ್ಯಪ್ರದೇಶಧ ಚಿಂದ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರು ಯುವತಿಯರು ಪ್ರವಾಸಕ್ಕಾಗಿ ತೆರಳಿದ್ದರು. ಈ ವೇಳೆ ಇಬ್ಬರು ಯುವತಿಯರಾದ ಮೇಘಾ ಮತ್ತು ವಂದನಾ ಸೆಲ್ಫಿ ತೆಗೆದುಕೊಳ್ಳುವ ಉದ್ದೇಶದಿಂದ ಪೆಂಚ್ ನದಿಗೆ ಇಳಿದಿದ್ದಾರೆ. ನದಿಯ ಮಧ್ಯದ ಬಂಡೆಯ ಮೇಲೆ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದ ವೇಳೆ ಏಕಾಏಕಿ ನದಿಯ ಹರಿವು ಹೆಚ್ಚಳವಾಗಿದೆ.
ಈ ವೇಳೆ ಅವರು ಹೊರಗೆ ಬರಲು ಸಾಧ್ಯವಾಗದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಆಗಮಿಸಿದ ಪೊಲೀಸರು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ. ಸರಿ ಸುಮಾರು 1 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.