ಕರ್ನಾಟಕ

karnataka

ETV Bharat / bharat

ತೆಲಂಗಾಣದಿಂದ ರಾಜಸ್ಥಾನಕ್ಕೆ ಕಾರ್ಮಿಕರ ಸಾಗಣೆ: ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ

ತೆಲಂಗಾಣದಿಂದ ರಾಜಸ್ಥಾನಕ್ಕೆ ಎರಡು ಕಂಟೇನರ್ ಟ್ರಕ್​​​​ಗಳಲ್ಲಿ ಸುಮಾರು 300ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸಾಗಿಸಲಾಗುತ್ತಿತ್ತು.

Two containers carrying 300 workers from Rajasthan back home
300ಕ್ಕೂ ಅಧಿಕ ಕಾರ್ಮಿಕರನ್ನು ಸಾಗಿಸುತ್ತಿದ್ದ ಕಂಟೆನರ್​ ಪತ್ತೆ ಹಚ್ಚಿದ ಮಹಾರಾಷ್ಟ್ರ ಪೊಲೀಸ್

By

Published : Mar 27, 2020, 1:26 PM IST

Updated : Mar 27, 2020, 1:42 PM IST

ಮಹಾರಾಷ್ಟ್ರ:ತೆಲಂಗಾಣದಿಂದ ರಾಜಸ್ಥಾನಕ್ಕೆ ಅಗತ್ಯ ಸರಕುಗಳನ್ನು ಸಾಗಿಸುತ್ತಿದ್ದ ಎರಡು ಕಂಟೇನರ್ ಟ್ರಕ್‌ಗಳಲ್ಲಿ ಸುಮಾರು 300ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದುದನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ಲಾಕ್​ಡೌನ್ ಆದೇಶ ಹೊರಡಿಸಿದ್ದು, ಇದರ ನಡುವೆ ಹತಾಶರಾದ ವಲಸೆ ಕಾರ್ಮಿಕರು ಮನೆಗೆ ತೆರಳುತ್ತಿರುವ ಕುರಿತು ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳನ್ನು ತಡೆದು ಪೊಲೀಸರು ತಪಾಸಣೆ ನಡೆಸುತ್ತಿದ್ದರು.

ವಲಸೆ ಕಾರ್ಮಿಕರು

ಈ ವೇಳೆ, ತೆಲಂಗಾಣದಿಂದ ಗಡಿ ಜಿಲ್ಲೆ ಯವತ್ಮಾಲ್‌ನಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡ 2 ಕಂಟೇನರ್ ಟ್ರಕ್‌ಗಳನ್ನು ತಡೆದು ತಪಾಸಣೆ ನಡೆಸಿತ್ತು. ಈ ವೇಳೆ ಪೊಲೀಸರು ಕಂಟೇನರ್‌ನೊಳಗೆ ಬರೋಬ್ಬರಿ 300ಕ್ಕೂ ಹೆಚ್ಚು ಕಾರ್ಮಿಕರನ್ನು ಕಂಡು ಅಚ್ಚರಿಗೊಳಗಾಗಿದ್ದರು.

ಇತರ ವಾಹನಗಳ ಸಂಚಾರಕ್ಕೆ ಬಿಗಿ ನಿರ್ಬಂಧಗಳು ಇರುವುದರಿಂದ ಮನೆಗಳಿಗೆ ತೆರಳಬೇಕೆಂಬ ಉದ್ದೇಶದಿಂದ ಕಾರ್ಮಿಕರನ್ನು ಕಂಟೇನರ್‌ ಮೂಲಕ ರಾಜಸ್ಥಾನಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗುತ್ತಿದೆ.

Last Updated : Mar 27, 2020, 1:42 PM IST

ABOUT THE AUTHOR

...view details