ಕರ್ನಾಟಕ

karnataka

ETV Bharat / bharat

ಚಂದ್ರಯಾನ- 2 ಟ್ರೋಲ್​ ಮಾಡಿದ ಪಾಕಿಸ್ತಾನಿಯರಿಗೆ ಬಿಸಿ ಮುಟ್ಟಿಸಿದ ಭಾರತೀಯ ನೆಟ್ಟಿಗರು - ಟ್ವಿಟ್ಟರ್​ನಲ್ಲಿ ಚಂದ್ರಯಾನ 2 ಲ್ಯಾಂಡಿಂಗ್

ಭಾರತದ ಚಂದ್ರಯಾನ- 2 ಯೋಜನೆಯ ಬಗ್ಗೆ ಜಾಗತಿಕ ಮಾಧ್ಯಮಗಳು ಪ್ರಶಂಸಿಸಿ, 'ಇವತ್ತಿನ ಸೋಲು ನಾಳೆಯ ಗೆಲುವಾಗಲಿದೆ. ಗೆಲುವು ತಡವಾಗಿ ಸಿಗಲಿದೆ' ಎಂದಿವೆ. ಆದ್ರೆ, ಪಾಕ್‌ ನಾಗರಿಕರು ವ್ಯಂಗ್ಯಭರಿತ ಟ್ರೋಲ್‌ಗಳನ್ನು ಮಾಡುತ್ತಿದ್ದು ಭಾರತೀಯರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Sep 7, 2019, 2:34 PM IST

ನವದೆಹಲಿ:ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ವಿಕ್ರಮ್​ ರೋವರ್​ ಚಂದ್ರದ ಅಂಗಳ ತಲುಪುವ ಕೊನೆಯ ನಿಮಷಗಳಲ್ಲಿ ಇಸ್ರೋದಿಂದ ಸಂಪರ್ಕ ಕಳೆದುಕೊಂಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡುತ್ತಿದ್ದ ಪಾಕಿಸ್ತಾನದ ನೆಟ್ಟಿಗರನ್ನು ಭಾರತೀಯರು ತಿರುಗೇಟು ನೀಡಿ ಬಿಸಿ ಮುಟ್ಟಿಸಿದ್ದಾರೆ.

ಭಾರತದ ನಡೆಯ ಬಗ್ಗೆ ಜಾಗತಿಕ ಮಾಧ್ಯಮಗಳು ಪ್ರಶಂಸಿ ಇವತ್ತಿನ ಸೋಲು ನಾಳೆಯ ಗೆಲುವಾಗಲಿದೆ. ಗೆಲುವು ತಡವಾಗಿ ಸಿಗಲಿದೆ ಎಂದಿವೆ.

ಪಾಕಿಸ್ತಾನ ಅರ್ಥೈಸಿಕೊಳ್ಳುವಲ್ಲಿ ಎಡವಿದ್ದು, ಚಂದ್ರಯಾನದ ಬಜೆಟ್​ ಪಾಕಿಸ್ತಾನದ ಆರ್ಥಿಕತೆಗಿಂತ ಹೆಚ್ಚಾಗಿದೆ. ಭಾರತಕ್ಕೆ 100 ಚಂದ್ರಯಾನಗಳನ್ನು ಕೈಗೊಳ್ಳುವ ಸಾಮರ್ಥ್ಯವಿದೆ ಎಂದು ಭಾರತೀಯ ನೆಟ್ಟಿಗರೊಬ್ಬರು ಕಿಚಾಯಿಸಿದ್ದಾರೆ.

ಭಾರತ ವಿಫಲವಾಗಿಲ್ಲ. ಲ್ಯಾಂಡರ್​ ಮೂಲಕ ಚಂದ್ರನೊಂದಿಗೆ ಸಂಪರ್ಕದಲ್ಲಿದ್ದೇವೆ. ಚಂದ್ರಯಾನ-2 ಅನ್ನು ಮುಂದೂಡಿದ್ದೇವೆ ಎಂದು ಚುಂಕಿ ಎಂಬುವವರು ಪ್ರತಿಕ್ರಿಸಿದ್ದಾರೆ.

ನಾಸಾ ಕೂಡ ಅನೇಕ ಬಾರಿ ವಿಫಲವಾಗಿದೆ. ಆದರೆ, ಸೋಲೇ ಗೆಲುವಿನ ಮೆಟ್ಟಿಲು. ಭಾರತ ಸೋತಿದ್ದು ಗೆಲುವು ಪಡೆಯಲು ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ.

ಆತ್ಮಿಯ ಪಾಕಿಸ್ತಾನಿಯರೇ ಇದು ನಮ್ಮ ಸೋಲಲ್ಲ. ಬೇರೆ ಯಾರೂ ಹೋಗಲು ಇಚ್ಛಿಸದ ಸ್ಥಳದಲ್ಲಿ ಇಳಿಯಲು ಪ್ರಯತ್ನಿಸಿ ಗೆಲುವಿನ ಸನಿಹದಲ್ಲಿ ಸೋತ್ತಿದ್ದೇವೆ. ಟೀಕಿಸುವ ಮುನ್ನ ಯೋಚಿಸಿ ಎಂದು ಇನ್ನೊಬ್ಬ ನೆಟ್ಟಿಗ ತಿರುಗೇಟು ನೀಡಿದ್ದಾರೆ.

ABOUT THE AUTHOR

...view details