ನವದೆಹಲಿ:ಅವಳಿ ಸಹೋದರರು ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಆದ್ರೂ ಇವರಲ್ಲೊಬ್ಬ ಮತ್ತೊಮ್ಮೆ ಪರೀಕ್ಷೆ ಬರೆಯಲು ಇಷ್ಟಪಡುತ್ತಿದ್ದಾರೆ. ಅವಳಿ ಸಹೋದರರಾದ ನಿಶಾಂತ್ ಮತ್ತು ಪ್ರಣವ್ ಅಗರ್ವಾಲ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಹೌದು, ಜೆಇಇ ಮುಖ್ಯ ಪರೀಕ್ಷೆಯಲ್ಲಿ ಒಂಬತ್ತು ಅಭ್ಯರ್ಥಿಗಳು ಶೇಕಡ 100ರಷ್ಟು ಅಂಕಗಳನ್ನು ಪಡೆದಿದ್ದು, ಇದರಲ್ಲಿ ನಿಶಾಂತ್ ಅಗರ್ವಾಲ್ ಸಹ ಒಬ್ಬರು. ಆದ್ರೆ ಇವರ ಸಹೋದರ ಪ್ರಣವ್ ಅಗರ್ವಾಲ್ ಶೇ. 99.93 ಅಂಕ ಪಡೆದಿದ್ದಾರೆ.
ಅವಳಿ ಸಹೋದರರಿಬ್ಬರು ಸುಮಾರು 10-12 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದು, ಅನುಮಾನಗಳನೇ ಇದ್ರೂ ಆ ದಿನದ ಕೊನೆಯಲ್ಲಿ ಚರ್ಚಿಸಿ ಉತ್ತರ ಕಂಡುಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಮೋಟಿವೇಟ್ ಮಾಡುತ್ತಿದ್ದರು. ಇಬ್ಬರು ಅವಳಿ ಸಹೋದರರಿಗೆ ಪರೀಕ್ಷೆಗಳಂದ್ರೆ ತುಂಬಾನೇ ಇಷ್ಟ.
ನನ್ನ ಸಹೋದರ ಪ್ರೇರೇಪಿಸಿದಕ್ಕೆ ನಾನು ಹೆಚ್ಚು ಅಂಕ ಗಳಿಸಲು ಸಾಧ್ಯವಾಯ್ತು. ನನ್ನ ಸಹೋದರ ನನಗಿಂತ ಹೆಚ್ಚು ಅಂಕ ಪಡೆದಿರುವುದು ನನಗೆ ಸಂತಸ ತಂದಿದೆ. ನಾನು ಮುಂಬರುವ ಏಪ್ರಿಲ್ನಲ್ಲಿ ಮತ್ತೆ ಪರೀಕ್ಷೆ ಬರೆಯುತ್ತಿದ್ದೇನೆ ಎಂದು ಪ್ರಣವ್ ಅಗರ್ವಾಲ್ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ.
ನಿಶಾಂತ್ ಅಗರ್ವಾಲ್ ಐಐಟಿ ಓದುವ ಆಸೆ ಹೊಂದಿದ್ದು, ಪ್ರಣವ್ ಕಂಪ್ಯೂಟರ್ ಸೈನ್ಸ್ ಅಭ್ಯಸಿಸಲು ಇಚ್ಛಿಸಿದ್ದಾರೆ. ಈಗಾಗಲೇ ಇಬ್ಬರು ಸಹೋದರರು ಈ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಏಪ್ರಿಲ್ನಲ್ಲಿ ಪರೀಕ್ಷೆ ಬರೆಯಲು ಪ್ರಣವ್ ತಯಾರಿ ನಡೆಸಿದ್ದಾರೆ.