ರಾಯದುರ್ಗ:ಟಿವಿ ನಟನ ಹೆಂಡ್ತಿ ನೇಣಿಗೆ ಶರಣಾಗಿದ್ದು, ಪೊಲೀಸರು ಕಿರುತರೆ ನಟನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಗುಂಟೂರು ನಿವಾಸಿ ಭಾರತಿ ಜೊತೆ ಸಿರಿಯಲ್ ನಟ ಮಧು ಪ್ರಕಾಶ್ 2014ರಲ್ಲಿ ಮದುವೆ ಆಗಿದ್ದರು. ಗಂಡ ಶೂಟಿಂಗ್ ಮುಗಿಸಿಕೊಂಡ ತಡವಾಗಿ ಬರುವುದರಿಂದ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಇನ್ನು ಈ ಜಗಳ ಮಂಗಳವಾರದವರೆಗೆ ನಡೆದಿದೆ.
ಎಂದಿನಂತೆ ಶೂಟಿಂಗ್ ಮುಗಿಸಿಕೊಂಡು ನಟ ಮಧು ಮನಗೆ ಹಿಂದಿರುಗಿದರು. ಬಳಿಕ ಪತ್ನಿ ಭಾರತಿಯನ್ನು ಕೂಗಿದ್ದಾರೆ. ಎಷ್ಟೇ ಕೂಗಿದರೂ ಪ್ರತಿಕ್ರಿಯೆ ನೀಡದ ಹಿನ್ನಲೆ ಮಧು ಪ್ರಕಾಶ್ ತಮ್ಮ ಬಳಿಯಿರುವ ಡುಬ್ಲಿಕೆಟ್ ಬೀಗದಿಂದ ಡೋರ್ ಓಪನ್ ಮಾಡಿ ನೋಡಿದಾಗ ಹೆಂಡ್ತಿ ಭಾರತಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದು ತಿಳಿದಿದೆ. ಮಧು ಪ್ರಕಾಶ್ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.
ನನ್ನ ಮಗಳಿಗೆ ಗಂಡ ಕಿರುಕುಳ ನೀಡುತ್ತಿದ್ದ, ವರದಕ್ಷಿಣೆ ತರುವಂತೆ ಬೆದರಕಿಯೊಡ್ಡುತ್ತಿದ್ದ ಎಂದು ಭಾರತಿ ಪೋಷಕರು, ಮಧು ಪ್ರಕಾಶ್ ಮೇಲೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಮಧು ಪ್ರಕಾಶ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.