ನವದೆಹಲಿ: ಅಮೆರಿಕ ಪ್ರವಾಸದ ಸನಿಹದಲ್ಲಿರುವ ಪ್ರಧಾನಿ ನರೇಂದ್ರ ಮೋದಿ. ಕಾಶ್ಮೀರದ 370 ವಿಧಿಯನ್ನು ವಿಶ್ವ ಸಂಸ್ಥೆ ಅಂಗಳಕ್ಕೆ ಕೊಂಡೊಯ್ದ ಪಾಕ್. ಮಧ್ಯಸ್ಥಿಕೆಯಿಂದ ದೂರವಿರುವುದಾಗಿ ಹೇಳುತ್ತಲ್ಲೇ ಅಗತ್ಯವಿದ್ದರೆ ಪಾಲುದಾರ ಆಗುವುದಾಗಿ ಹೇಳಿಕೆ ಕೊಟ್ಟ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದು ಹೆಜ್ಜೆ ಮುಂದೆ ಹೋಗಿ 'ಕಾಶ್ಮೀರವನ್ನು ಹಿಂದೂ- ಮುಸ್ಲಿಂ ಧರ್ಮಗಳ ಒಗ್ಗೂಡಿದ ಸಂಕೀರ್ಣ ವಿಷಯ' ಎಂದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಕಾಶ್ಮೀರದ ವಿವಾದವನ್ನು ಜಾಗತಿಕ ಮಟ್ಟದಲ್ಲಿ ಧರ್ಮದ ವ್ಯಾಪ್ತಿಗೆ ಮೊದಲ ಬಾರಿಗೆ ತಂದವರು ಟ್ರಂಪ್. ಈ ಹಿಂದೆಯೂ ಕಣಿವೆ ರಾಜ್ಯದ ವಿವಾದವನ್ನು ಎರಡು ರಾಷ್ಟ್ರಗಳ ನಡುವಿನ ಗಡಿ ಸಮಸ್ಯೆ ಎಂದು ವ್ಯಾಖ್ಯಾನ ಮಾಡಿದ್ದ ಬಹುತೇಕ ರಾಷ್ಟ್ರಗಳ ಮುಖಂಡರು, ಹಿಂದೂ-ಮುಸ್ಲಿಮರ ಧಾರ್ಮಿಕ ಚೌಕಟ್ಟಿಗೆ ಸೇರಿಸುವ ಸಾಹಸ ಮಾಡಿರಲಿಲ್ಲ. ಮೊದಲ ಬಾರಿಗೆ ಟ್ರಂಪ್ ಅದನ್ನು ಮಾಡಿದ್ದಾರೆ.ಇದೊಂದು ಸಂಕೀರ್ಣವಾದ ಪರಿಸ್ಥಿತಿಯಲ್ಲಿದೆ. ಇದು ಧರ್ಮದೊಂದಿಗೆ ಬಹಳಷ್ಟು ಸಂಬಂಧವಿದೆ. ಧರ್ಮವು ಒಂದು ಸಂಕೀರ್ಣ ವಿಷಯವಾಗಿದೆ. ಕಾಶ್ಮೀರ ಅತ್ಯಂತ ಸಂಕೀರ್ಣವಾದ ಸ್ಥಳ ಎಂದು ಹೇಳಿಕೆ ನೀಡಿದ್ದಾರೆ.