ಗುಂಟೂರು (ಆಂಧ್ರಪ್ರದೇಶ): ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಆಂಧ್ರದ ಗುಂಟೂರು ಜಿಲ್ಲೆಯ ಭಾರತೀಯ ಮೂಲದ ಬಾಲಕಿಯ ಸಾಮಾಜ ಸೇವೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಟ: ಭಾರತೀಯ ಮೂಲದ ಬಾಲಕಿ ಸನ್ಮಾನಿಸಿದ ಟ್ರಂಪ್
ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾದವರಿಗೆ ಸಹಾಯ ಮಾಡುತ್ತಿದ್ದ ಭಾರತೀಯ ಮೂಲದ ಬಾಲಕಿ ಗೌರವಿಸಿದ ಅಮೆರಿಕ ಅಧ್ಯಕ್ಷರು.
ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಬಾಲಕಿ ಆಹಾರವನ್ನು ಒದಗಿಸಿದ್ದಾಳೆ. ಮೇರಿಲ್ಯಾಂಡ್‌ನ ಹ್ಯಾನೋವರ್ ಹಿಲ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯಳನ್ನು ಶ್ವೇತಭವನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಾಲಕಿಯನ್ನು ಅಭಿನಂದಿಸಿದ್ದಾರೆ.
ಸ್ಕೌಟ್ ಅಂಡ್ ಗೈಡ್ಸ್ನ ಸದಸ್ಯೆಯಾಗಿರುವ ಶ್ರಾವ್ಯ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ 100 ಬಾಕ್ಸ್ ಬಿಸ್ಕತ್ತುಗಳನ್ನು ನೀಡಿದ್ದಾರೆ. 200 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ಶುಭಾಶಯ ಪತ್ರಗಳನ್ನು ಕಳುಹಿಸಲಾಗಿದೆ. ಬಾಲಕಿಯ ಪೋಷಕರು ಭಾರತೀಯ ಮೂಲದವರಾಗಿದ್ದು, ಸದ್ಯ ಅಮೆರಿಕದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದಾರೆ.