ನವದೆಹಲಿ: ಬೇರೆ ಮಾರ್ಗಗಳಿಗೆ ಹೋಲಿಸಿದರೆ ವಿಮಾನದ ಪ್ರಯಾಣ ಅತ್ಯಂತ ಸುರಕ್ಷಿತ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS) ದೆಹಲಿಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಜಿಎಂಆರ್ ಸಮೂಹ ಏರ್ಪಪಡಿಸಿದ್ದ 'ರೆಪೋಸಿಂಗ್ ದಿ ಫೇತ್ ಇನ್ ಫ್ಲೈಯಿಂಗ್' ವೆಬಿನಾರ್‌ನಲ್ಲಿ ಮಾತನಾಡಿದ ಅವರು, ವಿಮಾನದಲ್ಲಿ ಪ್ರಯಾಣಿಸುವಾಗ ರೋಗದ ಲಕ್ಷಣಗಳು ಇಲ್ಲದವರು ಕುಳಿತುಕೊಂಡರೂ ಹಾಗೂ ಇಬ್ಬರೂ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಧರಿಸಿದ್ದರೆ ವೈರಸ್ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ ಪ್ರಯಾಣಿಕರಿಗೆ ವಿಮಾನದಲ್ಲಿನ ಪ್ರಯಾಣ ಅತ್ಯಂತ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.