ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ದಟ್ಟವಾದ ಮಂಜು ಆವರಿಸಿದ್ದು, ತಾಪಮಾನವು ಕನಿಷ್ಠ ಏಳು ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಿದೆ.
ದೆಹಲಿಯ ಬಾರಪುಲ್ಲಾ ಫ್ಲೈಓವರ್ ಸೆರಿದಂತೆ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕಾಣಿಸಿಕೊಂಡಿತು. ಉತ್ತರ ರೈಲ್ವೆ ವಲಯದ ಕೆಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಂಜು ಆವರಿಸಿದ್ದು, 22 ರೈಲುಗಳಳು ತಡವಾಗಿ ಸಂಚಾರ ಆರಂಭಿಸಿವೆ. ಬೆಳಗ್ಗೆ 10-11 ಗಂಟೆವರೆಗೂ ಇದೇ ರೀತಿಯ ದಟ್ಟವಾದ ಮಂಜು ಮುಸುಕಿದ ವಾತಾವರಣ ಮುಂದುವರೆಯಲಿದ್ದು, ನಂತರ ತಾಪಮಾನ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಟ್ವಿಟ್ಟರ್ನಲ್ಲಿ ತಿಳಿಸಿದೆ.