ಕರ್ನಾಟಕ

karnataka

ETV Bharat / bharat

71 ಮಂದಿಗೆ ತಗುಲಿದ ಯುಕೆ ಕೊರೊನಾದ ಹೊಸ ಪ್ರಬೇಧ! - ಕೊರೊನಾ ಹೊಸ ಪ್ರಬೇಧ ಸಂಬಂಧ ಕೇಂದ್ರ ಸರ್ಕಾರದ ಕ್ರಮ

ಕೊರೊನಾ ಹೊಸ ಪ್ರಬೇಧ ಸೋಂಕು ಒಟ್ಟು 71 ಮಂದಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಪ್ರತ್ಯೇಕ ಆರೋಗ್ಯ ಸೌಲಭ್ಯಗಳ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಯುಕೆ ಕೊರೊನಾ ಹೊಸ ಪ್ರಬೇಧ
ಯುಕೆ ಕೊರೊನಾ ಹೊಸ ಪ್ರಬೇಧ

By

Published : Jan 6, 2021, 12:28 PM IST

ನವದೆಹಲಿ:ಕೊರೊನಾ ಹೊಸ ಪ್ರಬೇಧದ ಸೋಂಕು ತಗುಲಿರುವ ಒಟ್ಟು 71 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, "ಸೋಂಕಿತ ವ್ಯಕ್ತಿಗಳನ್ನು ಆಯಾ ರಾಜ್ಯ ಸರ್ಕಾರಗಳು ಗೊತ್ತುಪಡಿಸಿದ ಆರೋಗ್ಯ ಸೌಲಭ್ಯಗಳ ಕೊಠಡಿಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸೋಂಕಿತರ ಜೊತೆ ಪ್ರಯಾಣ ಬೆಳೆಸಿದವರು, ಪ್ರಾಥಮಿಕ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ" ಎಂದು ತಿಳಿಸಿದೆ.

ಡಿಸೆಂಬರ್​ 29ರಂದು ಬ್ರಿಟನ್​ನಿಂದ ಭಾರತಕ್ಕೆ ವಾಪಸ್​ ಆಗಿದ್ದ 6 ಮಂದಿಯಲ್ಲಿ ಕೊರೊನಾ ಹೊಸ ಪ್ರಬೇಧ ಪತ್ತೆಯಾಗಿತ್ತು. ಇದು ಶೇಕಡಾ 70 ರಷ್ಟು ವೇಗವಾಗಿ ಹರಡುತ್ತದೆ ಎಂದು ಈಗಾಗಲೇ WHO ವರದಿ ಮಾಡಿತ್ತು.

ಈಗಾಗಲೇ ಹೊಸ ರೂಪಾಂತರ ಕೊರೊನಾ ವೈರಸ್​ ಸೋಂಕು ಪತ್ತೆಯಾಗಿರುವ ಬಗ್ಗೆ ಡೆನ್ಮಾರ್ಕ್, ನೆದರ್ಲ್ಯಾಂಡ್​, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್​ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರ ವರದಿ ಮಾಡಿದೆ. ನವೆಂಬರ್ 25ರಿಂದ ಡಿಸೆಂಬರ್ 23 ಮಧ್ಯರಾತ್ರಿಯವರೆಗೆ ಸುಮಾರು 33,000 ಪ್ರಯಾಣಿಕರು ಯುಕೆಯಿಂದ ವಿವಿಧ ಭಾರತೀಯ ವಿಮಾನ ನಿಲ್ದಾಣಗಳ ಮೂಲಕ ದೇಶಕ್ಕೆ ಬಂದಿದ್ದಾರೆ. ಈ ಎಲ್ಲ ಪ್ರಯಾಣಿಕರನ್ನು ಆಯಾಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಆರ್‌ಟಿ - ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಿವೆ. ಸದ್ಯ ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿ ಎಚ್ಚರಿಕೆಯಿಂದ ನಿಭಾಯಿಸುತ್ತಿದೆ.

For All Latest Updates

TAGGED:

ABOUT THE AUTHOR

...view details