ಕರ್ನಾಟಕ

karnataka

ETV Bharat / bharat

ಸಾಲ ಪಾವತಿಸಲು ತನ್ನ ಕಿಡ್ನಿಯನ್ನೇ ಮಾರಿದ ಬಡ ಶಿಕ್ಷಕ! - ಬನಸ್ಕಂತ ಜಿಲ್ಲೆ

ಅನಿವಾರ್ಯತೆ ಹಾಗೂ ಅಸಹಾಯಕ ಪರಿಸ್ಥಿತಿ ಈ ಶಿಕ್ಷಕನ್ನು ಗಟ್ಟಿ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಮಾಡಿದೆ. ಸಾಲದಾತರ ಕಾಟ ತಡೆಯಲಾಗದ ಶಿಕ್ಷಕ ತನ್ನ ಒಂದು ಕಿಡ್ನಿಯನ್ನೇ ಮಾರಿ ಸಾಲ ತೀರಿಸಿದ್ದಾನೆ.

teacher sells his kidney
ರಾಜಭಾಯ್ ಪುರೋಹಿತ್

By

Published : Aug 18, 2020, 12:39 PM IST

ಬನಸ್ಕಂತ (ಗುಜರಾತ್​):ಸಾಲದಾತರಿಂದ ನಿರಂತರ ಕಿರುಕುಳಕ್ಕೆ ಒಳಗಾದ ಶಿಕ್ಷಕನೊಬ್ಬ ಸಾಲ ಮರುಪಾವತಿಸಲು ಬೇರೆ ದಾರಿ ಕಾಣದೆ ತನ್ನ ಒಂದು ಕಿಡ್ನಿಯನ್ನೇ ಮಾರಾಟ ಮಾಡಿ ಸಾಲ ಪಾವತಿಸಿದ್ದಾರೆ.

ಗುಜರಾತ್​ನ ಬನಸ್ಕಂತ ಜಿಲ್ಲೆಯ ಖೋಡಾ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜಭಾಯ್ ಪುರೋಹಿತ್ ಎಂಬವರು ಲಕ್ಷಾಂತರ ರೂ. ಕೈ ಸಾಲ ಪಡೆದಿದ್ದರು. ಒಂದು ವರ್ಷದಲ್ಲಿ ಅಸಲಿಗಿಂತ ಬಡ್ಡಿಯೇ ದುಪ್ಪಟ್ಟಾಗಿತ್ತು. ಹಣ ಹಿಂದಿರುಗಿಸಲಾಗದೆ ಸಾಲದಾತರ ಕಿರುಕುಳ ಕೂಡ ಹೆಚ್ಚಾಗತೊಡಗಿತು.

ರಾಜಭಾಯ್ ಪುರೋಹಿತ್ ಕುಟುಂಬ

ಅನಿವಾರ್ಯತೆ ಹಾಗೂ ಅಸಹಾಯಕ ಪರಿಸ್ಥಿತಿ ಈ ಶಿಕ್ಷಕನ್ನು ಗಟ್ಟಿ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಮಾಡಿದೆ. ಬೇರೆ ದಾರಿ ಕಾಣದ ಶಿಕ್ಷಕ ತನ್ನ ಮೂತ್ರಪಿಂಡವೊಂದನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಜಾಹೀರಾತು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಲಂಕಾದ ವೈದ್ಯರೊಬ್ಬರು ಕಿಡ್ನಿ ಖರೀದಿಸಲು ಮುಂದಾಗಿದ್ದು, ಅಲ್ಲಿಗೆ ಹೋಗಿ ರಾಜಭಾಯ್ 15 ಲಕ್ಷ ರೂ.ಗೆ ಕಿಡ್ನಿ ಮಾರಾಟ ಮಾಡಿ ಬಂದಿದ್ದಾರೆ. ಬಳಿಕ ಅಸಲು-ಬಡ್ಡಿ ಎಲ್ಲವನ್ನೂ ತೀರಿಸಿದ್ದಾರೆ.

ಕಿಡ್ನಿ ಮಾರಿದ ಶಿಕ್ಷಕ

ಆದರೂ ಕೂಡ ಸಾಲದಾತರು ಹೆಚ್ಚು ಹಣಕ್ಕೆ ಬೇಡಿಕೆ ಇಡಲು ಪ್ರಾರಂಭಿಸಿದ್ದು, ತಾಳ್ಮೆ ಕಳೆದುಕೊಂಡ ಶಿಕ್ಷಕ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪುರೋಹಿತ್‌ಗೆ ಹಣ ನೀಡಿದ್ದ ಹರ್ಷದ್ ವಾಜೀರ್, ದೇವಾ ರಬಾರಿ, ಓಖಾ ರಬಾರಿ ಮತ್ತು ವಶ್ರಮ್ ರಬಾರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ABOUT THE AUTHOR

...view details