ಕರ್ನಾಟಕ

karnataka

ETV Bharat / bharat

370 ರದ್ದು 130 ಕೋಟಿ ಭಾರತೀಯ ಕನಸು... ಕಾಶ್ಮೀರ ಜನತೆಗೆ ಸೆಲ್ಯೂಟ್​​ ಹೇಳಿದ ಪ್ರಧಾನಿ! - ನರೇಂದ್ರ ಮೋದಿ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸುವ ಆರ್ಟಿಕಲ್​ 370 ರದ್ದುಗೊಂಡಿದ್ದು, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಬಿಲ್​ ಅಂಗೀಕಾರಗೊಂಡಿದೆ. ಇದೇ ಸಂತೋಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಟ್ಟಾಗಿ 130 ಕೋಟಿ ಭಾರತೀಯರ ಕನಸು ನನಸು ಮಾಡುವುದಾಗಿ ಸರಣಿ ಟ್ವೀಟ್​ ಮಾಡಿದ್ದಾರೆ.

ನರೇಂದ್ರ ಮೋದಿ/ಆರ್ಟಿಕಲ್​ 370 ರದ್ದು

By

Published : Aug 6, 2019, 8:38 PM IST

ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್​​ 370 ವಿಧಿ ರದ್ದತಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರಕ್ಕೆ ಮಹತ್ವದ ಗೆಲುವು ಲಭ್ಯವಾಗಿದೆ.

ಇಂದು ಲೋಕಸಭೆಯಲ್ಲಿ ಬಿಲ್​ ಪಾಸ್​ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್​ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಒಟ್ಟಾಗಿದ್ದು, ಒಟ್ಟಿಗೆ ನಾವು ಮುನ್ನುಗಲಿದ್ದು, ಒಟ್ಟಾಗಿ 130 ಕೋಟಿ ಭಾರತೀಯರ ಕನಸು ಈಡೇರಿಸುತ್ತೇವೆ. ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದು ಮಹತ್ವದ ಸಂದರ್ಭವಾಗಿದ್ದು, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಬಿಲ್​ವೊಂದು ಅಗಾದ ಬೆಂಬಲದೊಂದಿಗೆ ಅಂಗೀಕಾರಗೊಂಡಿದೆ ಎಂದಿದ್ದಾರೆ.

ಇದೇ ವೇಳೆ ಲಡಾಕ್​ ಜನತೆಗೆ ವಿಶೇಷ ಅಭಿನಂದನೆ ಸಲ್ಲಿಕೆ ಮಾಡಿರುವ ಮೋದಿ, ಅನೇಕ ವರ್ಷಗಳಿಂದ ನೀವು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಲಡಾಕ್​ ಅಭಿವೃದ್ಧಿಗೆ ಎಲ್ಲ ರೀತಿಯ ಯೋಜನೆ ಹಾಕಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಜಮ್ಮು-ಕಾಶ್ಮೀರದ ಸಹೋದರ-ಸಹೋದರಿಯರಿಗೆ ಸೆಲ್ಯೂಟ್​​ ಎಂದಿರುವ ನಮೋ, ಅನೇಕ ವರ್ಷಗಳಿಂದ ನಿಮ್ಮನ್ನು ಭಾವನಾತ್ಮಕವಾಗಿ ಬ್ಲಾಕ್​ಮೇಲ್​ ಮಾಡಲಾಗಿದ್ದು, ಇನ್ಮುಂದೆ ಅದಕ್ಕೆ ಆಸ್ಪದ ಇರುವುದಿಲ್ಲ. ಬರುವ ದಿನಗಳಲ್ಲಿ ಅಭಿವೃದ್ದಿ ಪರ್ವ ಆರಂಭಗೊಳ್ಳಲಿದ್ದು, ಉತ್ತಮ ನಾಳೆಗಾಗಿ ಕಾಯಿರಿ ಎಂದು ಟ್ವೀಟ್​ ಮಾಡಿದ್ದಾರೆ.

ನಿನ್ನೆ ರಾಜ್ಯಸಭೆಯಲ್ಲಿ ವೋಟ್​ ಮೂಲಕ ಅಂಗೀಕಾರಗೊಂಡಿದ್ದ ಜಮ್ಮು-ಕಾಶ್ಮೀರ ಪುನಾರಚನೆ ಬಿಲ್​​, ಇಂದು ಲೋಕಸಭೆಯಲ್ಲೂ ಪಾಸ್​ ಆಗಿದ್ದು, ಇಷ್ಟು ದಿನ ರಾಜ್ಯವಾಗಿದ್ದ ಜಮ್ಮು-ಕಾಶ್ಮೀರ ಇನ್ಮುಂದೆ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಲಡಾಕ್​ ಕೇಂದ್ರಾಡಳಿತ ಪ್ರದೇಶವಾಗಿರಲಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಅಂದಿನ ಪ್ರಧಾನ ಮಂತ್ರಿಯಾದ ಜವಾಹರಲಾಲ್ ನೆಹರೂ ಅವರು ಆರ್ಟಿಕಲ್ 370, 35(ಎ) ವಿಧಿಯನ್ನು ಜಾರಿ ಮಾಡಿ ಭಾರತದಲ್ಲಿ ಕಾಶ್ಮೀರವನ್ನು ಒಂದು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದ್ದರು. ಅದಿನಿಂದಲೂ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ.

ABOUT THE AUTHOR

...view details