ಕರ್ನಾಟಕ

karnataka

ETV Bharat / bharat

ತಮಿಳುನಾಡು ಸರ್ಕಾರದ ಬೊಕ್ಕಸಕ್ಕೆ ಹರಿದು ಬಂತು 300 ಕೋಟಿ ರೂ. ದೇಣಿಗೆ - ಪಳನಿಸ್ವಾಮಿ

ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಲು ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯಸರ್ಕಾರಗಳು ಮನವಿ ಮಾಡಿದ್ದವು. ಮನವಿ ಹಿನ್ನೆಲೆ ತಮಿಳುನಾಡಿನ ಕೊರೊನಾ ಪರಿಹಾರ ನಿಧಿಗೆ 300 ಕೋಟಿಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ. ಈ ಕುರಿತು ತಮಿಳುನಾಡು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

TN govt receives over Rs 300 cr for COVID-19 battle
ತಮಿಳುನಾಡು ಸರ್ಕಾರದ ಬೊಕ್ಕಸಕ್ಕೆ ಹರಿದು ಬಂತು 300 ಕೋಟಿ ರೂಪಾಯಿ ದೇಣಿಗೆ

By

Published : May 1, 2020, 10:27 PM IST

ಚೆನ್ನೈ: ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಕೈ ಜೋಡಿಸುವಂತೆ ಆಯಾ ರಾಜ್ಯ ಸರ್ಕಾರಗಳು ಜನರಲ್ಲಿ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದವು. ಈ ಮನವಿಗೆ ಜನಸಾಮನ್ಯರು ಉತ್ತಮವಾಗಿ ಸ್ಪಂದಿಸಿದ್ದರು. ಇದೀಗ ತಮಿಳುನಾಡಿನ ಮುಖ್ಯಮಂತ್ರಿ ನಿಧಿಗೆ ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ಹರಿದುಬಂದಿದೆ.

ಸರ್ಕಾರಿ ನೌಕರರು, ಕಾರ್ಪೊರೇಟ್ ಸಂಸ್ಥೆಗಳು, ವ್ಯಕ್ತಿಗಳು, ಲೋಕೋಪಕಾರಿ ಸಂಸ್ಥೆಗಳು ಮತ್ತು ಇತರರು ಸಿಎಂ ಸಾರ್ವಜನಿಕ ಪರಿಹಾರ ನಿಧಿಗೆ ಇದುವರೆಗೆ 306.42 ಕೋಟಿ ರೂ. ಕೊಡುಗೆ ನೀಡಿದ್ದಾರೆ ಎಂದು ತಮಿಳುನಾಡು ಸರ್ಕಾರ ಮಾಹಿತಿ ನೀಡಿದೆ.

ಮಾರ್ಚ್​ 27ರಂದು ಸಿಎಂ ಪಳನಿಸ್ವಾಮಿ ಜನತೆಯಲ್ಲಿ ಮನವಿ ಸಲ್ಲಿಸಿದ್ದರು. ಕೊರೊನಾ ವಿರುದ್ಧದ ಹೋರಾಟಾದಲ್ಲಿ ನಿಮ್ಮ ನೆರವಿನ ಅಗತ್ಯವಿದೆ ಎಂದು ಮನವಿ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ 306.42 ಕೋಟಿ ರೂಪಾಯಿ ಹರಿದುಬಂದಿದೆ.

ಈ ದೇಣಿಗೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನ ಹಾಗೂ ಎಐಡಿಎಂಕೆ ಶಾಸಕರ ಒಂದು ತಿಂಗಳ ವೇತನವೂ ಒಳಗೊಂಡು ಸುಮಾರು 110 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಕೇವಲ ನಗದು ರೂಪದಲ್ಲಿ ಮಾತ್ರವಲ್ಲದೇ ಕೆಲವರು ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಕಿಟ್​​ಗಳು, ಆಹಾರ ಧಾನ್ಯಗಳನ್ನು ದಾನ ಮಾಡಿದ್ದಾರೆ. ಇವರೆಲ್ಲರಿಗೂ ಮುಖ್ಯಮಂತ್ರಿ ಧನ್ಯವಾದ ಅರ್ಪಿಸಿದ್ದಾರೆ ಅಂತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details