ನವದೆಹಲಿ:ಬಾಲಕೋಟ್ ಮೇಲಿನ ವಾಯುದಾಳಿ ವೇಳೆ ರಫೇಲ್ ಜೆಟ್ ಇದ್ದಿದ್ದರೆ ಅದರ ಫಲಿತಾಂಶ ದುಪ್ಪಟ್ಟಾಗಿರುತ್ತಿತ್ತು ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಬಿ.ಎಸ್.ಧನೋವಾ ಹೇಳಿದ್ದಾರೆ.
ಏರೋಸ್ಪೇಸ್ ಪವರ್ ಕುರಿತಾದ ಸೆಮಿನಾರ್ ಸಂದರ್ಭದಲ್ಲಿ ಬಾಲಕೋಟ್ ವಾಯುದಾಳಿ ಬಗ್ಗೆ ಮಾತನಾಡಿರುವ ಅವರು, ವಾಯುದಾಳಿಯ ವೇಳೆ ತಂತ್ರಜ್ಞಾನ ನಮ್ಮ ಪರವಾಗಿತ್ತು. ಉತ್ತಮ ತಂತ್ರಜ್ಞಾನದಿಂದ ನಿಖರವಾಗಿ ದಾಳಿಯನ್ನು ಸಂಯೋಜಿಸಲು ಸಾಧ್ಯವಾಯಿತು ಎಂದಿದ್ದಾರೆ.