ಕರ್ನಾಟಕ

karnataka

ETV Bharat / bharat

ನಡುರಾತ್ರಿವರೆಗೆ ಕಾದು, ಮಲಗಿದ್ದ ಪತ್ನಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಕಿರಾತಕ ತಂದೆ...! - ವಿಕಾರಾಬಾದ್​ದಲ್ಲಿ ಮೂರು ಕೊಲೆ​ ಸುದ್ದಿ

ಕಬ್ಬಿಣದ ರಾಡ್​ನಿಂದ ಹೆಂಡ್ತಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಗಂಡ ನೇರ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ರಾಡ್​ನಿಂದ ಹೆಂಡ್ತಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಗಂಡ

By

Published : Aug 5, 2019, 6:23 PM IST

ವಿಕಾರಾಬಾದ್​:ಕಬ್ಬಿಣದ ರಾಡ್​ನಿಂದ ಮಲಗಿರುವ ಮಕ್ಕಳು ಮತ್ತು ಹೆಂಡ್ತಿಯ ತಲೆಗೆ ಹೊಡೆದು ಸಾಯಿಸಿರುವ ಘಟನೆ ತಾಂಡೂರು ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಪ್ರವೀಣ್​ಕುಮಾರ್​, ಆತನ ಹೆಂಡ್ತಿ ಚಾಂದಿನಿ (30) ಮತ್ತು ಮಕ್ಕಳಾದ ಅಯಾನ್​ (10), ಎಂಜಿಲ್​ (5) ವಿಕಾರಾಬಾದ್​ನ ಶಿವರಾಮನಗರದಲ್ಲಿ ವಾಸಿಸುತ್ತಿದ್ದರು. ಹೆಂಡ್ತಿ ಚಾಂದಿನಿಯ ನಡುವಳಿಕೆಯಿಂದ ಅನುಮಾನಗೊಂಡ ಪ್ರವೀಣ್​ ನಿತ್ಯ ಜಗಳವಾಡುತ್ತಿದ್ದನು.

ರಾಡ್​ನಿಂದ ಹೆಂಡ್ತಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಗಂಡ

ಭಾನುವಾರ ಇಬ್ಬರ ಮಧ್ಯೆ ಮತ್ತೆ ಜಗಳವಾಗಿದೆ. ಇದರಿಂದ ಕೋಪಗೊಂಡ ಪ್ರವೀಣ್​ ಮಧ್ಯೆರಾತ್ರಿವರೆಗೂ ಕಾದಿದ್ದಾನೆ. ಹೆಂಡ್ತಿ, ಮಕ್ಕಳು ನಿದ್ರೆಗೆ ಜಾರಿದಾಗ ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್​ ಠಾಣೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿ ಶರಣಾಗಿದ್ದಾನೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮನೆಯನ್ನು ಪರಿಶೀಲಿಸಿದರು. ಮೃತದೇಹಗಳನ್ನು ಮರೋಣತ್ತೋರ ಪರೀಕ್ಷೆಗೆ ಕಳುಹಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ABOUT THE AUTHOR

...view details