ಪ್ರಕಾಶಂ(ಆಂಧ್ರ ಪ್ರದೇಶ): ವಿದ್ಯುತ್ ತಂತಿ ತಗುಲಿ ಮೂವರು ಮಕ್ಕಳು ಸಾವಿಗೀಡಾಗಿರುವ ದಾರುಣ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಕರೆಂಟ್ ಶಾಕ್ಗೆ ಸುಟ್ಟು ಕರಕಲಾದ ಮೂರು ಮಕ್ಕಳು.. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಧ್ವಜ ಸ್ತಂಬಕ್ಕೆ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದ ಪರಿಣಾಮ ಮೂವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ.
ಸುಟ್ಟು ಕರಕಲಾದ ಮೂರು ಮಕ್ಕಳು
ಸಂತಮಗುಲೂರ್ ಬಳಿಯ ಕೊಪ್ಪರಂ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಧ್ವಜ ಸ್ತಂಬದ ಬಳಿ ಮಕ್ಕಳು ಆಟವಾಡುತ್ತಿರುವಾಗ, ಧ್ವಜ ಸ್ತಂಬಕ್ಕೆ ವಿದ್ಯುತ್ ತಂತಿ ತಗುಲಿದ್ದು, ಕರೆಂಟ್ ಶಾಕ್ ಹೊಡೆದ ಪರಿಣಾಮ ಮೂವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ.
ಈ ದುರ್ಘಟನೆಯಲ್ಲಿ 11 ವರ್ಷ ವಯಸ್ಸಿನ ಶೇಖ್ ಪಠಾಣ್ ಗೌಸ್, ಶೇಖ್ ಹಸನ್ ಬುಡೇ ಮತ್ತು ಪಠಾಣ್ ಅಮರ್ ಎಂಬ ಮಕ್ಕಳು ಸಾವಿಗೀಡಾಗಿದ್ದಾರೆ. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.