ಮೇಷ :
ಈ ವಾರ, ಉದ್ಯಮಿಗಳು ಅವರ ವ್ಯವಹಾರದ ಪ್ರಯೋಜನಕ್ಕೆ ಸಂಬಂಧಿಸಿ ಹೊಸ ಜನರೊಂದಿಗೆ ಸಂಪರ್ಕ ಹೊಂದಲಿದ್ದಾರೆ ಮತ್ತು ಭೇಟಿ ಮಾಡಲಿದ್ದಾರೆ. ನೀವು ನಿಮ್ಮ ಹಳೆಯ ಸ್ನೇಹಿತರು ಅಥವಾ ಪ್ರೀತಿಪಾತ್ರರನ್ನು ಭೇಟಿಯಾಗಬಹುದು, ಇದು ನಿಮಗೆ ಹೆಚ್ಚಿನ ಸಂತೋಷವನ್ನು ತರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರುವಂತೆ ಸಲಹೆ ನೀಡಲಾಗುತ್ತದೆ;ನೀವು ಅತಿಯಾದ ಕಾರ್ಯದೊತ್ತಡ ತೆಗೆದುಕೊಳ್ಳವುದನ್ನು ತಪ್ಪಿಸಬೇಕು. ಅಧಿಕ ಕಾರ್ಯದೊತ್ತಡದಿಂದಾಗಿ ಬೆನ್ನು ನೋವು ಅಥವಾ ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದುವ ಸಾಧ್ಯತೆಯಿದೆ. ನೀವು ನಿಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಬಹುದು. ಯಾವುದೇ ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ಅವರೊಂದಿಗೆ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ನಿಯಂತ್ರಣವಿರುವಂತೆ ನಿಮಗೆ ಸಲಹೆ ನೀಡಲಾಗುತ್ತದೆ. ಈ ವಾರದ ಮಧ್ಯಭಾಗದಲ್ಲಿ, ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆಯಿದೆ. ನೀವು ನಿಮ್ಮ ಸ್ನೇಹಿತರಿಂದ ಉಡುಗೊರೆಗಳನ್ನು ಪಡೆಯುವಿರಿ. ನಿಮ್ಮ ಸಂಬಂಧಿಕರು ಮತ್ತು ಕುಟುಂಬ ಸದಸ್ಯರೊಂದಿಗಿನ ನಿಮ್ಮ ಆತ್ಮೀಯತೆಯು ಹೆಚ್ಚಾಗಲಿದೆ. ನಿಮ್ಮ ವ್ಯವಹಾರವನ್ನು ವೃದ್ಧಿಸುವ ಬಗ್ಗೆ ಅಥವಾ ದೀರ್ಘಾವಧಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಗೊಂದಲಕ್ಕೆ ಒಳಗಾಗಬಹುದು. ವಿದ್ಯಾರ್ಥಿಗಳು ಅವರ ಓದಿನಲ್ಲಿ ಏಕಾಗ್ರತೆಯನ್ನು ಹೊಂದುತ್ತಾರೆ ಆದರೆ ಕೆಟ್ಟ ಪ್ರಭಾವ ಬೀರುವ ಸ್ನೇಹಿತರ ಬಗ್ಗೆ ಎಚ್ಚರದಿಂದಿರಬೇಕು.
ವೃಷಭ :
ನೀವು ಈ ವಾರದ ಪ್ರಾರಂಭದಲ್ಲಿ ಸ್ವಲ್ಪ ಉದ್ವೇಗಕ್ಕೆ ಒಳಗಾಗುವಿರಿ. ಈ ವಾರವು ಪ್ರಯಾಣ ಮಾಡಲು ನಿಮಗೆ ಅನುಕೂಲಕರವಾಗಿರುವುದಿಲ್ಲ ನಿಮಗೆ ಹೊಟ್ಟೆ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ನಿಮ್ಮ ಹೊಸ ಸಂಬಂಧವು ನಿಮ್ಮ ಚಿಂತೆಗೆ ಮುಖ್ಯ ಕಾರಣವಾಗಿರುತ್ತದೆ ಆದ್ದರಿಂದ ನೀವು ಹೊಸ ವ್ಯಕ್ತಿಗಳನ್ನು ಭೇಟಿಯಾಗುವುದನ್ನು ತಪ್ಪಿಸಬೇಕು. ಅವಿವಾಹಿತರು ಈ ವಾರದ ಅವಧಿಯಲ್ಲಿ ಸೂಕ್ತ ಜೀವನ ಸಂಗಾತಿಯನ್ನು ಕಂಡುಕೊಳ್ಳಲು ಮತ್ತು ಭೇಟಿಯಾಗಲು ಶಕ್ತರಾಗುತ್ತಾರೆ. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚಿಸುವ ಮೂಲಕ ಮುಖ್ಯ ವಿಚಾರಗಳನ್ನು ಪರಿಹರಿಸಲು ಶಕ್ತರಾಗುವಿರಿ. ನೀವು ನಿಮ್ಮ ಮನೆ ಅಲಂಕಾರಕ್ಕಾಗಿ ಖರ್ಚು ಮಾಡುವಿರಿ. ನೀವು ಉದ್ಯಮ ಪ್ರವಾಸಕ್ಕೆ ತೆರಳಬಹುದು. ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು, ನಿಯಮಿತ ವ್ಯಾಯಮ ಮಾಡುವುದು ಮತ್ತು ಆರೋಗ್ಯಕರ ಆಹಾರಕ್ರಮ ಹೊಂದುವಂತೆ ನಿಮಗೆ ಶಿಫಾರಸು ಮಾಡಲಾಗುತ್ತದೆ. ಜನರೊಂದಿಗಿನ ನಿಮ್ಮ ವರ್ತನೆಯು ವಿನಯ ಹಾಗೂ ಮೃದು ಆಗಿರುತ್ತದೆ. ನೀವು ನಿಮ್ಮ ದೈನಂದಿನ ಜೀವನದಿಂದ ಏನಾದರೂ ಹೊಸದನ್ನು ಪ್ರಾರಂಭಿಸಲು ಪ್ರೇರಣಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಈ ವಾರ ನಿರಾಳತೆ ಸಿಗಲಿದೆ.
ಮಿಥುನ :
ನೀವು ನಿಮ್ಮ ಹಿರಿಯರೊಂದಿಗೆ ಒಳ್ಳೆಯ ಸಮಯವನ್ನು ಕಳೆಯುವಿರಿ. ಆದರೂ ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸಾಧಾರಣವಾಗಿರುತ್ತದೆ. ನಿಮ್ಮ ಪ್ರೀತಿ ಜೀವನವು ಕೂಡಾ ನೀರಸವಾಗಿರುತ್ತದೆ. ನೀವು ನಿಮ್ಮ ಸಂಗಾತಿಯ ಭಾವನೆಗಳ ಬಗ್ಗೆ ಗಮನ ನೀಡಬೇಕು ಇಲ್ಲವಾದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಯಿದೆ. ನೀವು ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಣುವಿರಿ. ನಿಮ್ಮ ಆದಾಯವು ಹೆಚ್ಚಾಗಬಹುದು ಮತ್ತು ನಿಮ್ಮ ಸಂಪತ್ತಿನಲ್ಲಿ ಹೆಚ್ಚಳ ಉಂಟಾಗುವುದನ್ನು ನೀವು ಕಾಣುವಿರಿ. ನಿಮ್ಮ ಆರೋಗ್ಯವು ನಿಮಗೆ ಸಹಕಾರ ನೀಡಲಿದೆ. ಸಂಕ್ಷಿಪ್ತವಾಗಿ, ಈ ವಾರವು ನಿಮಗೆ ಸಂಪೂರ್ಣ ಸಕಾರಾತ್ಮಕತೆಯಾಗಲಿದೆ. ಈ ವಾರದ ಮಧ್ಯಭಾಗದಲ್ಲಿ ನೀವು ಸ್ವಲ್ಪ ಗೊಂದಲಕ್ಕೆ ಒಳಗಾಗುವಿರಿ, ಆದರೆ ನೀವು ಶಾಂತ ಹಾಗೂ ಸ್ಥಿರವಾಗಿರಬೇಕು. ಈ ವಾರದ ಕೊನೆಯ ಎರಡು ದಿನಗಳಲ್ಲಿ, ನಿಮ್ಮ ಖರ್ಚು ಹೆಚ್ಚಾಗಲಿದೆ ಮತ್ತು ನೀವು ನಿಮ್ಮ ಕುಟುಂಬಕ್ಕೆ ವೆಚ್ಚಮಾಡಲು ಹಿಂಜರಿಯುವುದಿಲ್ಲ. ಹಣದ ಬಲದಲ್ಲಿ ಪರವಶಗೊಳ್ಳಬೇಡಿ, ಇಲ್ಲವಾದಲ್ಲಿ ಅದು ನಿಮ್ಮ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಕರ್ಕಾಟಕ :
ನೀವು ಹೆಚ್ಚಿನ ಉತ್ಸಾಹದೊಂದಿಗೆ ವಾರವನ್ನು ಪ್ರಾರಂಭಿಸುವಿರಿ ಮತ್ತು ನಿಮ್ಮ ವೃತ್ತಿಯು ನಿಮ್ಮ ಮುಖ್ಯ ಆದ್ಯತೆಯಾಗಿರುತ್ತದೆ. ನಿಮ್ಮ ಕುಟುಂಬ ಜೀವನವು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ನಿರೀಕ್ಷಿತ ಯಶಸ್ಸು ಪಡೆಯುವಿರಿ. ಆದರೂ ಕಠಿಣ ಶ್ರಮಕ್ಕೆ ಯಾವುದೇ ತಡೆ ಇರುವುದಿಲ್ಲ ಎಂಬುದನ್ನು ಅವರು ನೆನಪಲ್ಲಿಡಬೇಕು. ಉದ್ಯೋಗಿಗಳು ಮತ್ತು ಉದ್ಯಮಿಗಳು ಅವರು ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುತ್ತಾರೆ. ಈ ಅಧಿಯಲ್ಲಿ ನೀವು ದೀರ್ಘಾವಧಿ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬಹುದು. ನೀವು ಅತ್ಯಂತ ಸಂತೋಷ ಹಾಗೂ ಉತ್ಸಾಹದಿಂದ ಇರಬಹುದು.ನೀವು ನಿಮ್ಮ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತೀರಿ. ನೀವು ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಲು ನಿಮ್ಮ ಅಹಂ ಅನ್ನು ನಿಯಂತ್ರಿಸುವಂತೆ ಸಲಹೆ ನೀಡಲಾಗುತ್ತದೆ. ಕೊನೆಯ ಎರಡು ದಿನಗಳಲ್ಲಿ, ಕಾಲಿಕ ಬದಲಾವಣೆಯಿಂದ, ನಿಮಗೆ ಜ್ವರ ಅಥವಾ ಅಜೀರ್ಣ ಸಮಸ್ಯೆ ಉಂಟಾಗಬಹುದು. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸುತ್ತಾಟಕ್ಕೆ ತೆರಳಬಹುದು. ನೀವು ನಿಮ್ಮ ಕುಟುಂಬದ ಸಂತೋಷಕ್ಕಾಗಿ ಗ್ಯಾಜೆಟ್ ಅಥವಾ ವಾಹನ ಖರೀದಿಸಬಹುದು.
ಸಿಂಹ :
ಈ ವಾರದ ಪ್ರಾರಂಭದಲ್ಲಿ ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ಮತ್ತು ನಿಮ್ಮ ಬಾಲ್ಯದ ದಿನಗಳ ನೆನಪಿನಲ್ಲಿ ಕಳೆದುಹೋಗುವಿರಿ. ನಿಮ್ಮ ಆದಾಯದೊಂದಿಗೆ ಸಮಾಜ, ಕಚೇರಿ, ವ್ಯವಹಾರ ವಲಯ ಮತ್ತು ಮನೆಯಲ್ಲಿ ನಿಮ್ಮ ಗೌರವವು ಹೆಚ್ಚಾಗಲಿದೆ. ನೀವು ನಿಮ್ಮ ಸ್ಪರ್ಧಿಗಳ ವಿರುದ್ಧ ಗೆಲುವು ಸಾಧಿಸುವಿರಿ. ನಿಮ್ಮ ಒಡಹುಟ್ಟಿದವರು ನಿಮಗೆ ಪ್ರಯೋಜನಕಾರಿಯಾಗಲಿದ್ದಾರೆ. ನೀವು ನಿಮ್ಮ ಸ್ನೇಹಿತರೊಂದಿಗೆ ಸುತ್ತಾಟಕ್ಕೆ ತೆರಳುವಿರಿ ಮತ್ತು ಮನರಂಜನೆ ಮಾಡುವಿರಿ. ನೀವು ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಮತ್ತು ಹೂಡಿಕೆಗಳಲ್ಲಿಯೂ ತೊಡಗಿಕೊಳ್ಳಬಹುದು. ನಿಮ್ಮ ಹಿರಿಯರು ನಿಮಗೆ ಸಹಕಾರ ನೀಡಲಿದ್ದಾರೆ ಮತ್ತು ಈ ವಾರದ ಕೊನೆಯ ದಿನಗಳಲ್ಲಿನಿಮಗೆ ಪ್ರಯೋಜನಕಾರಿಯೂ ಆಗಲಿದ್ದಾರೆ. ನೀವು ಹೆಚ್ಚು ಉತ್ಸಾಹದಿಂದ ಇರುವಿರಿ. ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವಿರಿ. ನಿಮ್ಮ ನವೀನ ಆಲೋಚನೆಗಳು ಮತ್ತು ಕಠಿಣ ಶ್ರಮದಿಂದ ನಿಮ್ಮ ಮೇಲಾಧಿಕಾರಿಗಳನ್ನು ಖುಷಿಪಡಿಸುವ ಸಾಧ್ಯತೆಯು ಅಧಿಕವಾಗಿದೆ. ಹೆಚ್ಚು ಜಾಣತನದಿಂದ ಇರುವಂತೆ ಸಲಹೆ ನೀಡಲಾಗುತ್ತದೆ ಇದರಿಂದ ನಿಮ್ಮ ಒಳ್ಳೆಯ ಸ್ವಭಾವದ ಪ್ರಯೋಜನವನ್ನು ಯಾರೂ ಪಡೆಯುವುದಿಲ್ಲ. ಈ ವಾರ ನಿಮ್ಮ ಕ್ರೀಯಾಶೀಲತೆಯು ಅತ್ಯುನ್ನತವಾಗಿರುತ್ತದೆ.
ಕನ್ಯಾ :
ನಿಮ್ಮ ಸುತ್ತಲಿರುವ ಜನರಿಗೆ ನೋವು ಉಂಟುಮಾಡುವುದನ್ನು ತಪ್ಪಿಸಲು ನೀವು ಎಚ್ಚರಿಕೆಯಿಂದ ಇರುವಂತೆ ಮತ್ತು ನಿಮ್ಮ ಅಹಂ ಅನ್ನು ನಿಯಂತ್ರಿಸುವಂತೆ ನಿಮಗೆ ಸಲಹೆ ನೀಡಲಾಗುತ್ತದೆ. ಈ ಅವಧಿಯಲ್ಲಿ ನೀವು ಸ್ವಲ್ಪ ಗೊಂದಲಕ್ಕೆ ಒಳಗಾಗುವಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಉಂಟಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಉತ್ತಮವಾಗಿರುವುದಿಲ್ಲ, ನಿಮಗೆ ನಿಮ್ಮ ಹೃದಯದಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ವಾರದ ಮಧ್ಯಭಾಗದದಿಂದ ನಿಮ್ಮ ರೈಲು ಪಥದಲ್ಲಿ ಸಾಗುತ್ತದೆ ಮತ್ತು ನೀವು ಉತ್ಸಾಹ ಹೊಂದುವಿರಿ. ನೀವು ನಿಮ್ಮ ಸಂಬಂಧಿಕರು, ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಪಿಕ್ನಿಕ್ ತೆರಳಲು ಯೋಜನೆ ರೂಪಿಸಬಹುದು. ಈ ವಾರದ ಕೊನೆಯ ದಿನಗಳಲ್ಲಿ ಏನಾದರೂ ಹೊಸದನ್ನು ಪ್ರಾರಂಭಿಸಲು ನೀವು ಹಲವು ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. ಕೊನೆಯ ಎರಡು ದಿನಗಳಲ್ಲಿ ನೀವು ನಿಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹೊಂದುವಿರಿ. ವಿದ್ಯಾರ್ಥಿಗಳು ಈ ವಾರದ ಮಧ್ಯಭಾಗದಿಂದ ಧನಾತ್ಮಕ ಭಾವನೆಯನ್ನು ಹೊಂದಲಿದ್ದಾರೆ. ನಿಮ್ಮ ಕಚೇರಿ ಮತ್ತು ಮನೆಯ ಸುತ್ತಲಿನ ವಾತಾವರಣವನ್ನು ಸುಧಾರಿಸಲು ನಿಮಗೆ ಖರ್ಚಾಗಬಹುದು ಮತ್ತು ನೀವು ಆತ್ಮವಿಶ್ವಾಸ ಹೊಂದುವಿರಿ.