ಬೋಧಗಯಾ: ಮಕ್ಕಳ ಓದಿಗಾಗಿ ಭಾರವಾಗಿರುವ ದಿನಗಳು ಇವು. ತಂದೆ-ತಾಯಿಯಂದಿರು ಮಕ್ಕಳ ಫೀಸ್ ಕಟ್ಟಲು ಪರದಾಡುತ್ತಿರುತ್ತಾರೆ. ಫೀಸ್ ಕಟ್ಟಲು ಸಾಧ್ಯವಾಗದೆ ಮಕ್ಕಳನ್ನು ಶಾಲೆ ಬಿಡಿಸಿದ ಉದಾಹರಣೆಗಳೂ ಸಾಕಷ್ಟಿವೆ. ಹೀಗಿರುವಾಗ ಬಿಹಾರದ ಬೋಧಗಯಾದಲ್ಲಿರುವ ಪದ್ಮಾವಣಿ ಶಾಲೆ ಮಕ್ಕಳ ಬಳಿ ಕಸದ ಮೂಲಕವೇ ಸ್ಕೂಲ್ ಫೀಸ್ ಕಟ್ಟಿಸಿಕೊಳ್ಳುತ್ತೆ.
ಪದ್ಮವಾಣಿ ಶಾಲೆಯಲ್ಲಿ ಕಸವನ್ನೇ ಫೀಜ್ ಆಗಿ ಮಕ್ಕಳ ಬಳಿ ವಸೂಲಿ ಮಾಡಲಾಗುತ್ತೆ. ಅದಕ್ಕೆ ಅಲ್ಲಿನ ವಿದ್ಯಾರ್ಥಿಗಳು ಪ್ರತಿದಿನ ರಸ್ತೆ ಬಳಿ, ಮನೆ ಬಳಿ ಬಿದ್ದಿರುವ ಕಸವನ್ನು ಆರಿಸಿಕೊಂಡು ಸಂಗ್ರಹಿಸಿಡುತ್ತಾರೆ. ಶಾಲೆಗೆ ಪಠ್ಯಪುಸ್ತಕ ಜೊತೆಗೆ ಕಸವನ್ನು ಒಯ್ಯುತ್ತಾರೆ ಈ ವಿದ್ಯಾರ್ಥಿಗಳು. ಶಾಲೆಯ ಅಂಗಳದಲ್ಲಿ ದೊಡ್ಡದಾದ ಡಬ್ಬಿಗಳಲ್ಲಿ ಈ ಕಸವನ್ನು ಎಸೆಯುತ್ತಾರೆ. ಈ ಕಸವನ್ನು ಯಜಮಾನ ಪುನರುತ್ಪಾದಕ ಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲಿಂದ ಬಂದ ಹಣವನ್ನು ವಿದ್ಯಾರ್ಥಿಗಳ ಫೀಸ್ ಆಗಿ ಪರಿಗಣಿಸಲಾಗುತ್ತೆ.
‘‘ಪರಿಸರ ಸಂರಕ್ಷಣೆ ಕುರಿತು ಮಕ್ಕಳಿಗೆ ಶಿಕ್ಷಣ ನೀಡಲು ನಾವು ಬಯಸುತ್ತೇವೆ. ಅದಕ್ಕಾಗಿಯೇ ಕಸವನ್ನು ದಾರಿಯುದ್ದಕ್ಕೂ ತರಲು ನಾವು ಅವರಿಗೆ ಮನವಿ ಮಾಡುತ್ತೇವೆ. ಬಳಿಕ ಅದನ್ನು ಪುನರುತ್ಪಾದಕ ಘಟಕಕ್ಕೆ ಕಳುಹಿಸುತ್ತೇವೆ’’ ಎಂದು ಉಪಾಧ್ಯಯರು ಹೇಳುತ್ತಾರೆ.