ಪುರಿ:ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಯೆಸ್ ಬ್ಯಾಂಕ್ನಲ್ಲಿಟ್ಟಿರುವ ತನ್ನ 545 ಕೋಟಿ ರೂಪಾಯಿಗಳನ್ನು ಪುರಿಯ ಜಗನ್ನಾಥ ಮಂದಿರ ಗುರುವಾರ ಹಿಂಪಡೆದುಕೊಳ್ಳಲಿದೆ.
ಯೆಸ್ ಬ್ಯಾಂಕ್ನಿಂದ 545 ಕೋಟಿ ರೂ. ಹಿಂಪಡೆಯಲಿದೆ ಜಗನ್ನಾಥ ದೇವಾಲಯ... ಇದಕ್ಕೆ ಒಪ್ಪುತ್ತಾ ಆಡಳಿತ ಮಂಡಳಿ?
ಯೆಸ್ ಬ್ಯಾಂಕ್ನಲ್ಲಿಟ್ಟಿರುವ 545 ಕೋಟಿ ರೂಪಾಯಿಗಳ ದೊಡ್ಡ ಮೊತ್ತವನ್ನು ಪುರಿಯ ಜಗನ್ನಾಥ ಮಂದಿರ ಗುರುವಾರ ಹಿಂಪಡೆದುಕೊಳ್ಳಲಿದೆ.
ಯೆಸ್ ಬ್ಯಾಂಕ್
ಸದ್ಯ ಯೆಸ್ ಬ್ಯಾಂಕಿನಿಂದ ಗ್ರಾಹಕರೊಬ್ಬರು 50 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಮೊತ್ತವನ್ನು ಹಿಂಪಡೆಯದಂತೆ ಮಿತಿ ಹೇರಲಾಗಿದೆ. ಈ ಮಿತಿಯ ನಿರ್ಬಂಧವು ಬುಧವಾರ ಸಂಜೆ 6ಕ್ಕೆ ಅಂತ್ಯಗೊಳ್ಳಲಿದೆ. ಹೀಗಾಗಿ ಗುರುವಾರದಂದು ಜಗನ್ನಾಥ ದೇವಾಲಯ ತನ್ನ ಬಹುದೊಡ್ಡ ಮೊತ್ತವನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ.
ಎರಡು ಪ್ರತ್ಯೇಕ ಇ-ಟ್ರಾನ್ಸಫರ್ಗಳ ಮೂಲಕ ಯೆಸ್ ಬ್ಯಾಂಕಿನಲ್ಲಿರುವ ಹಣವನ್ನು ಪುರಿಯ ಯುಕೋ ಬ್ಯಾಂಕ್ ಮುಖ್ಯ ಶಾಖೆಗೆ ವರ್ಗಾಯಿಸಲಾಗುವುದು ಎಂದು ಶ್ರೀ ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿಯ ಅಜಯ್ ಕುಮಾರ ಜೆನಾ ತಿಳಿಸಿದ್ದಾರೆ.