ಅಸ್ಸೋಂ: ಅಕ್ರಮವಾಗಿ ಭಾರತೀಯ ಗಡಿ ಪ್ರವೇಶಿಸಿದ್ದ ಮೂವತ್ತು ಮಂದಿ ಬಾಂಗ್ಲಾ ಪ್ರಜೆಗಳನ್ನು ಅಸ್ಸೋಂನಿಂದ ಗಡಿಪಾರು ಮಾಡಲಾಗಿದೆ.
ಭಾರತದಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾ ಪ್ರಜೆಗಳ ಗಡಿಪಾರು..! - Assam
ಕರೀಮ್ಗಂಜ್ನ ಕಾಳಿಬರಿ ಘಾಟ್ ಚೆಕ್ ಪಾಯಿಂಟ್ ಮೂಲಕ ಮೂವತ್ತು ಮಂದಿ ಬಾಂಗ್ಲಾ ಪ್ರಜೆಗಳನ್ನು ಭಾರತದಿಂದ ಹೊರ ಕಳುಹಿಸಲಾಗಿದೆ.
Bangladeshi .
ಕರೀಂಗಂಜ್ನ ಕಾಳಿಬರಿ ಘಾಟ್ ಚೆಕ್ ಪಾಯಿಂಟ್ ಮೂಲಕ 30 ಮಂದಿ ಬಾಂಗ್ಲಾ ಪ್ರಜೆಗಳನ್ನು ಭಾರತದಿಂದ ಹೊರಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಗಡಿಪಾರು ಮಾಡಲಾಗಿರುವ ಇವರು 2015ರಲ್ಲಿ ಗಡಿ ನುಸುಳಿ ಬಂದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅಸ್ಸೋಂನ ಹತ್ತು ಜಿಲ್ಲೆಗಳಲ್ಲಿ ವಾಸವಿದ್ದರು ಎಂದು ಕರೀಂಗಂಜ್ ಪೊಲೀಸ್ ವರಿಷ್ಠಾಧಿಕಾರಿ ಮನಬೇಂದ್ರ ಡೆಬ್ರಾಯ್ ಮಾಹಿತಿ ನೀಡಿದ್ದಾರೆ.