ಕರ್ನಾಟಕ

karnataka

ETV Bharat / bharat

ಶಂಕಿತ ಕೊರೊನಾ ವೈರಸ್​ಗೆ ಭಾರತದಲ್ಲಿ ಮೊದಲ ಬಲಿ!

ಶಂಕಿತ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನಲಾದ ಥೈಲ್ಯಾಂಡ್​ ಮೂಲದ 32 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಶಂಕಿತ ಕೊರೊನಾ ವೈರಸ್​ಗೆ ಭಾರತದಲ್ಲಿ ಮೊದಲ ಬಲಿಯಾದಂತಾಗಿದೆ.

Coronavirus
ಶಂಕಿತ ಕೊರೊನಾ ವೈರಸ್​ಗೆ ಭಾರತದಲ್ಲಿ ಮೊದಲ ಬಲಿ

By

Published : Jan 28, 2020, 10:46 AM IST

ಪಶ್ಚಿಮ ಬಂಗಾಳ: ಶಂಕಿತ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನಲಾದ ವಿದೇಶಿ ಮಹಿಳೆಯೊಬ್ಬರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್​ ಹೋಲುವ ಲಕ್ಷಣಗಳಾದ ಹೊಟ್ಟೆ ನೋವು, ವಾಕರಿಕೆ ಹಾಗೂ ಜ್ವರದಿಂದ ಬಳಲುತ್ತಿದ್ದ ಥೈಲ್ಯಾಂಡ್​ ಮೂಲದ 32 ವರ್ಷ ವಯಸ್ಸಿನ ಮಹಿಳೆಯೊಬ್ಬರು ಜನವರಿ 21ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇನ್ನು ಇವರ ಸಾವಿನ ಸಂಬಂಧ ಥಾಯ್ ಕಾನ್ಸುಲೇಟ್ ಜನರಲ್​ಗೆ ಮಾಹಿತಿ ನೀಡಲಾಗಿದ್ದು, ಮೃತಳ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳ ವರದಿಯನ್ನು ನೀಡುವಂತೆ ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಸೂಚಿಸಿದ್ದಾರೆ.

ಈ ಮಹಿಳೆ ನವೆಂಬರ್​ ತಿಂಗಳಲ್ಲೇ ಥೈಲ್ಯಾಂಡ್​ನಿಂದ ಹೊರಟು ಪ್ರವಾಸ ಕೈಗೊಂಡಿದ್ದು, ಭಾರತಕ್ಕೆ ಬರುವ ಮೊದಲು ನೇಪಾಳಕ್ಕೆ ಭೇಟಿ ನೀಡಿರುವುದು ತಿಳಿದು ಬಂದಿದೆ. ಚೀನಾದ ವುಹಾನ್​ ನಗರದಲ್ಲಿ ಮೊದಲು ಕೊರೊನಾ ವೈರಸ್ ಪತ್ತೆಯಾಗಿದ್ದು, ಚೀನಾದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಏಷ್ಯಾದ ಇತರ ರಾಷ್ಟ್ರಗಳಿಗೂ ಸೋಂಕು ಹರಡಿದೆ. ಥೈಲ್ಯಾಂಡ್​ನಲ್ಲಿ ಈಗಾಗಲೇ 8 ಮಂದಿ​ ಕೊರೊನಾ ವೈರಸ್​ಗೆ ಬಲಿಯಾಗಿರುವುದಾಗಿ ವರದಿಯಾಗಿದೆ.

ABOUT THE AUTHOR

...view details