ಹೈದರಾಬಾದ್:ಜನನ ಪ್ರಮಾಣಪತ್ರ ಮತ್ತು ಇತರ ದಾಖಲೆಗಳನ್ನು ಪಡೆದುಕೊಳ್ಳಲು ಅರ್ಜಿ ನಮೂನೆಗಳಲ್ಲಿ 'ಯಾವುದೇ ಧರ್ಮ, ಜಾತಿ ಇಲ್ಲ' ಎಂಬ ಕಾಲಮ್ ಇರಬೇಕೆಂದು ಕೋರಿ ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ತೆಲಂಗಾಣದ ದಂಪತಿ ಇದರಿಂದಾಗಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಜನರ ಆಲೋಚನೆಯನ್ನು ಬದಲಾಯಿಸುತ್ತದೆ ಎಂದು ಈ ದಂಪತಿ ಆಶಿಸಿದ್ದಾರೆ.
ಮಗನ ಜನನ ಪ್ರಮಾಣ ಪತ್ರದಲ್ಲಿ ಜಾತಿ, ಧರ್ಮದ ಕಾಲಂ ತೆಗೆದುಹಾಕುವಂತೆ ದಂಪತಿ ಹೋರಾಟ - hyderabAdf
ಉಸ್ಮಾನಿಯಾ ವಿಶ್ವವಿದ್ಯಾಲಯದ ಸಂಶೋಧಕ ಡೇವಿಡ್ ಮತ್ತು ಪತ್ರಕರ್ತೆಯಾಗಿರುವ ಅವರ ಪತ್ನಿ ಸಂದೇಪಗು ಸ್ವರೂಪಾ ತಮ್ಮ ಮಗನ ಜನನ ಪ್ರಮಾಣಪತ್ರದಲ್ಲಿ 'ಯಾವುದೇ ಧರ್ಮ, ಜಾತಿ ಇಲ್ಲ' ಎಂಬ ಕಾಲಂ ಸೇರಿಸಬೇಕೆಂದು ತೆಲಂಗಾಣ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
"ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದ್ವೇಷ, ತಾರತಮ್ಯ ಮತ್ತು ಹತ್ಯೆಗಳನ್ನು ನಾವು ಕಂಡಿದ್ದೇವೆ. ಯಾವುದೇ ಧರ್ಮ, ಜಾತಿಯನ್ನು ಆಚರಿಸದೆ ನಾವು ಬದಲಾವಣೆ ತರಬಹುದು" ಎಂದು ಡೇವಿಡ್ ಅಜ್ಜಪಾಗು ಹೇಳಿದ್ದಾರೆ.
ಉಸ್ಮಾನಿಯಾ ವಿಶ್ವವಿದ್ಯಾಲಯದ ಸಂಶೋಧಕರಾಗಿರುವ ಡೇವಿಡ್ ಮತ್ತು ಪತ್ರಕರ್ತೆಯಾಗಿರುವ ಅವರ ಪತ್ನಿ ಸಂದೇಪಗು ಸ್ವರೂಪಾ ತಮ್ಮ ಮಗನ ಜನನ ಪ್ರಮಾಣಪತ್ರದಲ್ಲಿ 'ಯಾವುದೇ ಧರ್ಮ, ಜಾತಿ ಇಲ್ಲ' ಎಂಬ ಕಾಲಮ್ ಸೇರಿಸಬೇಕೆಂದು ತೆಲಂಗಾಣ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ತೆಲಂಗಾಣ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.