ಕರ್ನಾಟಕ

karnataka

ETV Bharat / bharat

ಟಿಆರ್​ಎಸ್​ನ ಮೂವರು ಶಾಸಕರಿಗೆ ಕೊರೊನಾ ದೃಢ..!

ತೆಲಂಗಾಣ ರಾಷ್ಟ್ರಸಮಿತಿ (ಟಿಆರ್​ಎಸ್​)ಪಕ್ಷದ ಮೂವರು ಶಾಸಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರ ಸಂಪರ್ಕಿತರನ್ನು ಶೋಧಿಸಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

TRS MLAs
ಟಿಆರ್​ಎಸ್ ಶಾಸಕರು

By

Published : Jun 16, 2020, 6:41 AM IST

ಹೈದರಾಬಾದ್​(ತೆಲಂಗಾಣ):ನಿಜಾಮಾಬಾದ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಿಗಲ ಗಣೇಶ್​ಗೆ ಸೋಮವಾರ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ತೆಲಂಗಾಣದಲ್ಲಿ ಒಟ್ಟು ಮೂವರು ಶಾಸಕರಲ್ಲಿ ಸೋಂಕು ದೃಢಪಟ್ಟಿದೆ.

ಮೂರು ದಿನಗಳ ಹಿಂದೆ ಜನ್​ಗಾಂವ್ ಶಾಸಕ ಮತಿರೆಡ್ಡಿ ಯಾದಗಿರಿ ರೆಡ್ಡಿ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಂತರ ಅವರನ್ನ ಮನೆಗೆ ಕಳುಹಿಸಿ ಹೋಮ್​ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

ಭಾನುವಾರ ನಿಜಾಮಾಬಾದ್​ ಗ್ರಾಮೀಣ ಶಾಸಕ ಬಾಜಿರೆಡ್ಡಿ ಗೋವರ್ಧನ್ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ತೆಲಂಗಾಣದಲ್ಲಿ ಒಟ್ಟು ಮೂವರು ಶಾಸಕರಿಗೆ ಸೋಂಕು ದೃಢಪಟ್ಟಿದೆ.

ಅಚ್ಚರಿಯ ವಿಷಯವೆಂದರೆ ಈ ಮೂವರೂ ಶಾಸಕರೂ ಕೂಡ ತೆಲಂಗಾಣ ರಾಷ್ಟ್ರಸಮಿತಿ (ಟಿಆರ್​ಎಸ್​) ಪಕ್ಷಕ್ಕೆ ಸೇರಿದವರಾಗಿದ್ದಾರೆ. ಎಲ್ಲ ಶಾಸಕರ ಸಂಪರ್ಕಿತರನ್ನು ಹುಡುಕಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

ತೆಲಂಗಾಣದಲ್ಲಿ ಈವರೆಗೆ 4,974 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 2,377 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 185 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ABOUT THE AUTHOR

...view details