ಕರ್ನಾಟಕ

karnataka

ETV Bharat / bharat

ಬಾಲಕಿ ಮೇಲೆ 22 ದಿನ ಸಾಮೂಹಿಕ ಅತ್ಯಾಚಾರ: ಓರ್ವ ಆರೋಪಿಯ ಬಂಧನ - ಒಡಿಶಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ

ಮನೆ ಬಿಟ್ಟು ಬಂದ ಬಾಲಕಿಯನ್ನು ಮನೆಗೆ ತಲುಪಿಸುವ ನೆಪದಲ್ಲಿ ಕರೆದೊಯ್ದ ವ್ಯಕ್ತಿಯೋರ್ವ 22 ದಿನಗಳ ಕಾಲ ಆಕೆಯ ಮೇಳೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Teenage girl gang-raped for 22 days in Odisha
ಬಾಲಕಿ ಮೇಲೆ 22 ದಿನ ಸಾಮೂಹಿಕ ಅತ್ಯಾಚಾರ

By

Published : Oct 15, 2020, 6:58 AM IST

ಕಟಕ್(ಒಡಿಶಾ): ಹೆತ್ತವರೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋದ 17 ವರ್ಷದ ಅಪ್ರಾಪ್ತೆಯನ್ನು ಒಡಿಶಾದ ಕಟಕ್‌ನಲ್ಲಿರುವ ಕೋಳಿ ಸಾಕಣೆ ಕೇಂದ್ರಕ್ಕೆ ವ್ಯಕ್ತಿಯೊಬ್ಬ ಕರೆದೊಯ್ದಿದ್ದು, 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.

ಜಗತ್ಸಿಂಗ್‌ಪುರ ಜಿಲ್ಲೆಯ ಟಿರ್ಟೋಲ್ ಮೂಲದ ಅಪ್ರಾಪ್ತೆ ಕಳೆದ ತಿಂಗಳು ತನ್ನ ಹೆತ್ತವರೊಂದಿಗೆ ಜಗಳವಾಡಿದ ನಂತರ ಮನೆಯಿಂದ ಓಡಿ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ಮರಳಲು ಕಟಕ್‌ನ ಒಎಂಪಿ ಸ್ಕ್ವೇರ್‌ನಲ್ಲಿ ಬಸ್ ಹತ್ತಲು ಅವಳು ಕಾಯುತ್ತಿದ್ದಾಗ ಒಬ್ಬ ವ್ಯಕ್ತಿಯು ಬೈಕ್​ನಲ್ಲಿ ತನ್ನ ಮನೆಗೆ ತಲುಪಿಸುವ ನೆಪ ಹೇಳಿ ಆಕೆಯನ್ನು ಕರೆದೊಯ್ದಿದ್ದಾನೆ.

ಆದರೆ ಟಿರ್ಟೋಲ್​ಗೆ ಹೋಗುವ ಬದಲು ಆಕೆಯನ್ನು ಗತಿರೌಟ್‌ಪಟ್ನಾ ಗ್ರಾಮದಲ್ಲಿರುವ ಕೋಳಿ ಸಾಕಣೆ ಕೇಂದ್ರಕ್ಕೆ ಕರೆದೊಯ್ದು 22 ದಿನಗಳ ಕಾಲ ಬಲವಂತವಾಗಿ ಕೋಣೆಯಲ್ಲಿ ಕೂಡಿಹಾಕಿದ್ದಾನೆ. ನಂತರ ಇಬ್ಬರು ಪುರುಷರು ಜಮೀನಿನಲ್ಲಿ ಪದೇ ಪದೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಾಂಪೌಂಡ್​ನಲ್ಲಿ ಏನೋ ದುಷ್ಕೃತ್ಯ ನಡೆಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ ನಂತರ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿ, ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details