ಕರ್ನಾಟಕ

karnataka

ETV Bharat / bharat

ಸ್ನೇಹಿತರೊಂದಿಗೆ ಸೇರಿ ಜೂಜಾಟ: ಖ್ಯಾತ ನಟ ಸೇರಿ 12 ಮಂದಿಯ ಬಂಧನ

ಸ್ನೇಹಿತರೊಂದಿಗೆ ಸೇರಿ ಜೂಜಾಟದಲ್ಲಿ ತೊಡಗಿದ್ದ ಸಮಯದಲ್ಲಿ ನಟ ಸೇರಿದಂತೆ 12 ಮಂದಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Tamil actor Shaam
Tamil actor Shaam

By

Published : Jul 28, 2020, 3:53 PM IST

ಚೆನ್ನೈ:ದೇಶಾದ್ಯಂತ ಮಹಾಮಾರಿ ಕೊರೊನಾ ಅಬ್ಬರ ಜೋರಾಗಿದ್ದು, ಇದರ ಮಧ್ಯೆ ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿ ಸ್ನೇಹಿತರೊಂದಿಗೆ ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ದಕ್ಷಿಣ ಭಾರತದ ಖ್ಯಾತ ನಟ ಸೇರಿ 12 ಮಂದಿಯನ್ನು ಬಂಧಿಸುವಲ್ಲಿ ತಮಿಳುನಾಡು ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳು ನಟ ಶ್ಯಾಮ್​​ ಚೆನ್ನೈನ ನುಂಗಂಬಕ್ಕಂ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಜೂಜಾಟ ಆಡುತ್ತಿದ್ದರು. ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿರುವ ಪೊಲೀಸರು, 12 ಮಂದಿಯನ್ನು ಬಂಧಿಸಿದ್ದಾರೆ.

ಸ್ನೇಹಿತರೊಂದಿಗೆ ಮಧ್ಯರಾತ್ರಿಯವರೆಗೆ ಜೂಜಾಟದಲ್ಲಿ ತೊಡಗಿದ್ದ ಕಾರಣ ಬಂಧನ ಮಾಡಲಾಗಿದ್ದು, ಈ ವೇಳೆ ಅವರು ಇದ್ದ ಸ್ಥಳದಿಂದ ಕೆಲವೊಂದು ಟೋಕನ್​ ಕೂಡ ವಶಪಡಿಸಿಕೊಳ್ಳಲಾಗಿದೆ. ಅವುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂಜಾಟ ಕಾಯ್ದೆಯಡಿ ಇವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ತದನಂತರ ಜಾಮೀನಿನ ಮೇಲೆ ರಿಲೀಸ್​​ ಮಾಡಲಾಗಿದೆ. ತಮಿಳಿನ ಖುಷಿ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದ ಶಾಮ್​ ತೆಲಗು, ಕನ್ನಡ ಹಾಗೂ ಮಲಯಾಳಂನ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.

ABOUT THE AUTHOR

...view details