ನವದೆಹಲಿ:ನಿರ್ಭಯಾ ಪ್ರಕರಣದ ಅಪರಾಧಿ ವಿನಯ್ ಶರ್ಮ ಅರ್ಜಿಯೊಂದರ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ಈ ಹಿಂದೆ ವಿನಯ್ ರಾಷ್ಟ್ರಪತಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತವಾಗಿತ್ತು. ರಾಷ್ಟ್ರಪತಿ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ವಿನಯ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ರಾಷ್ಟ್ರಪತಿ ನಿರ್ಧಾರದ ವಿರುದ್ಧ ನಿರ್ಭಯಾ ಅಪರಾಧಿಯಿಂದ ಸುಪ್ರೀಂಗೆ ಮೇಲ್ಮನವಿ: ಇಂದು ವಿಚಾರಣೆ - ಕ್ಷಮಾದಾನ ಅರ್ಜಿ
ದಿನದಿಂದ ದಿನಕ್ಕೆ ನಿರ್ಭಯಾ ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಪರಾಧಿ ವಿನಯ್ ಶರ್ಮಾ ಸುಪ್ರೀಂಕೋರ್ಟ್ನಲ್ಲಿ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ನಿರ್ಣಯದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ.
ಫೆಬ್ರವರಿ 1ರಂದು ವಿನಯ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದರು. ಅರ್ಜಿ ತಿರಸ್ಕೃತವಾದ ಕಾರಣಕ್ಕೆ ಮಂಗಳವಾರ ವಿನಯ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಸುಪ್ರೀಂ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠವು ಬೆಳಗ್ಗೆ 10.30ಕ್ಕೆ ಈ ಅರ್ಜಿಯ ವಿಚಾರಣೆ ನಡೆಸಲಿದೆ.
ಕೆಲ ದಿನಗಳ ಹಿಂದೆ ನಿರ್ಭಯಾ ಅಪರಾಧಿಗಳಿಗೆ ಶಿಕ್ಷೆ ಕಡಿಮೆಗೊಳಿಸಿ, ಮರಣದಂಡನೆಯನ್ನು ಜೀವಾವಧಿಗೆ ಇಳಿಸುವಂತೆ ನಿರ್ಭಯಾ ಪರ ವಕೀಲ ಎ.ಪಿ. ಸಿಂಗ್ ಕೋರಿದ್ದರು. ಸದ್ಯಕ್ಕೆ ನಾಲ್ವರು ಅಪರಾಧಿಗಳನ್ನು ತಿಹಾರ್ ಜೈಲಿನಲ್ಲಿ ಇಡಲಾಗಿದ್ದು ಎಲ್ಲ ಅಪರಾಧಿಗಳ ಕಾನೂನು ಹೋರಾಟ ಮುಗಿದ ನಂತರ ಗಲ್ಲುವಿಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.