ನವದೆಹಲಿ:'ಇಂಡಿಯಾ' ಬದಲಾಗಿ ದೇಶಕ್ಕೆ 'ಭಾರತ್' ಎಂದು ಮರುನಾಮಕರಣ ಮಾಡಬೇಕೆಂದು ಕೋರಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಇಂದು ಕೋರ್ಟ್ಗೆ ಗೈರಾದ ಕಾರಣ, ಮುಂದಿನ ದಿನಾಂಕ ನಿಗದಿಪಡಿಸದೆ ವಿಚಾರಣೆಯನ್ನು ಮುಂದೂಡಲಾಗಿದೆ.

ದೇಶಕ್ಕಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸಲು ಹಾಗೂ ಸಂವಿಧಾನವನ್ನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಕೋರಿ ದೆಹಲಿ ಮೂಲದ ವ್ಯಕ್ತಿಯೋರ್ವ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು.
ಬ್ರಿಟಿಷರು ಆಂಗ್ಲ ಭಾಷೆಯಲ್ಲಿಟ್ಟ 'ಇಂಡಿಯಾ' ಹೆಸರು ತೆಗೆದು ಹಾಕಿ ವಸಾಹತುಶಾಹಿ ಕಾಲದ ನೆನಪಿನಿಂದ ದೇಶದ ಪ್ರಜೆಗಳು ಹೊರಬಂದು, ಅವರಲ್ಲಿ ರಾಷ್ಟ್ರೀಯತೆಯ ಹೆಮ್ಮೆಯ ಭಾವವನ್ನು 'ಭಾರತ್' ಎನ್ನುವ ಹೆಸರು ಮೂಡಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಕಠಿಣ ಪರಿಶ್ರಮವನ್ನು ಸಹ ಇದು ಸಮರ್ಥಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ಮೇ 29 ರಂದು ವಿಚಾರಣೆ ಆರಂಭಿಸಿದ್ದ ನ್ಯಾಯಾಲಯವು, ಜೂ.2ಕ್ಕೆ ಮುಂದೂಡಿತ್ತು.