ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ದೇಶದ ಜನರು ಲಾಕ್ಡೌನ್ನಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ನಿಮ್ಮ ಭಾಷಣ ಪರಿಹಾರ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ನಮ್ಮ ಜನರು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ. ಹಾಗಾಗಿ ಸರ್ಕಾರ ಜನರಿಗಾಗಿ ಬೆಂಬಲ ನೀಡಬೇಕು. ಆದರೆ, ಅದು ಲಾಠಿ ಚಾರ್ಜ್ ಅಥವಾ ನಿಮ್ಮ ಭಾಷಣದ ಮೂಲಕವಲ್ಲ, ಹೊರತಾಗಿ ರೇಷನ್ ಮತ್ತು ಹಣದ ರೂಪದಲ್ಲಿ" ಎಂದಿದ್ದಾರೆ.