ಕರ್ನಾಟಕ

karnataka

ETV Bharat / bharat

ಶನಿವಾರ ತಡರಾತ್ರಿ ದಿಢೀರನೆ ಭಾರತ-ಚೀನಾ ಕಮಾಂಡರ್ ಮಟ್ಟದ ಮಾತುಕತೆ ದೃಢ! ಕಾರಣವೇನು? - ಭಾರತ-ಚೀನಾ

ಜೂನ್ 6, ಜೂನ್ 22, ಜೂನ್ 30 ಹಾಗೂ ಜುಲೈ 14 ರ ನಂತರ ಲೆಫ್ಟಿನೆಂಟ್ ಜನರಲ್ ಹರೇಂದರ್ ಸಿಂಗ್ ಹಾಗೂ ಪಿಎಲ್‌ಎಯ ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಯ ಕಮಾಂಡರ್ ಮೇಜರ್ ಜನರಲ್ ಲಿನ್ ಲಿಯು ನಡುವಿನ ಐದನೇ ಕಾರ್ಪ್ಸ್ ಕಮಾಂಡರ್-ಮಟ್ಟದ ಸಭೆ ನಡೆಯಲಿದೆ. ಮಾತುಕತೆಯ ದಿನಾಂಕ ಇನ್ನೂ ನಿಗದಿಪಡಿಸಿಲ್ಲ.

india-china
ಭಾರತ-ಚೀನಾ

By

Published : Aug 2, 2020, 6:04 PM IST

ನವದೆಹಲಿ:ಪೂರ್ವ ಲಡಾಖ್​ನಲ್ಲಿ ಭಾರತ ಹಾಗೂ ಚೀನಾ ನಡುವಣ ಐದನೇ ಕಮಾಂಡರ್ ಮಟ್ಟದ ಮಾತುಕತೆಯನ್ನು ಶನಿವಾರ ಸಂಜೆ ದಿಢೀರನೆ ಖಚಿತಪಡಿಸಲು, ಚೀನಾ ಸೇನೆಯು ಭಾರತೀಯ ಸೇನೆಯನ್ನು ಕರೆಸಿಕೊಳ್ಳಲು ಎರಡು ಪ್ರಮುಖ ಕಾರಣಗಳನ್ನು ಅಂದಾಜಿಸಲಾಗಿದೆ.

ಮೊದಲನೆಯದಾಗಿ ಪಿಎಲ್‌ಎ(ಪೀಪಲ್ಸ್ ಲಿಬರೇಶನ್ ಆರ್ಮಿ) ಕಳೆದ ಶುಕ್ರವಾರ ದೇಶಾದ್ಯಂತದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನಿರತವಾಗಿತ್ತು.

ಎರಡನೆಯದು, ಶನಿವಾರ ತಡರಾತ್ರಿ ಇಂತಹ ಅಧಿಕೃತ ವ್ಯವಹಾರವನ್ನು ಮಾತನಾಡಲು ಅಥವಾ ಸಭೆಗಳನ್ನು ಕರೆಯಲು ಸೂಕ್ತ ಎಂದು ಹೇಳಲಾಗುವುದಿಲ್ಲ. ಆದರೂ ಚೀನಾದ ಮಿಲಿಟರಿ ತತ್ವಜ್ಞಾನಿ ಸನ್ ಟ್ಸು ಅವರ ಈ ನಿರ್ಧಾರದಿಂದಾಗಿ ಎದುರಾಳಿ ರಾಷ್ಟ್ರವು ಇಂತಹ ಬೆಳವಣಿಗೆಯನ್ನು ನಿರೀಕ್ಷಿಸಿರುವುದಿಲ್ಲ ಅಥವಾ ಅದಕ್ಕಾಗಿ ಯಾವುದೇ ಸಿದ್ಧತೆಗಳನ್ನು ನಡೆಸಿರುವುದಿಲ್ಲ.

ಜೂನ್ 6, ಜೂನ್ 22, ಜೂನ್ 30 ಹಾಗೂ ಜುಲೈ 14 ರ ನಂತರ ಲೆಫ್ಟಿನೆಂಟ್ ಜನರಲ್ ಹರೇಂದರ್ ಸಿಂಗ್ ಹಾಗೂ ಪಿಎಲ್‌ಎಯ ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಯ ಕಮಾಂಡರ್ ಮೇಜರ್ ಜನರಲ್ ಲಿನ್ ಲಿಯು ನಡುವಿನ ಐದನೇ ಕಾರ್ಪ್ಸ್ ಕಮಾಂಡರ್-ಮಟ್ಟದ ಸಭೆ ಇದಾಗಿದೆ.

ಮಾತುಕತೆಯ ದಿನಾಂಕವನ್ನೂ ಇನ್ನೂ ನಿಗದಿಪಡಿಸಲಿಲ್ಲ. ಆದರೆ ಭಾರತ ಸೇನೆ ಈ ಮಾತುಕತೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದೆ.

ABOUT THE AUTHOR

...view details