ನವದೆಹಲಿ :ಕೊರೊನಾ ಚಿಕಿತ್ಸೆಯಲ್ಲಿ ಬಳಸುವ ಔಷಧಗಳನ್ನು ಅಕ್ರಮ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜಧಾನಿಯ ಎಲ್ಲ ರಸಾಯನಶಾಸ್ತ್ರಜ್ಞರಿಗೆ ಡ್ರಗ್ ಕಂಟ್ರೋಲರ್ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಔಷಧಗಳ ಕಾಳ ದಂಧೆಯ ಬಗ್ಗೆ ವರದಿಗಳು ಬಂದ ಬಳಿಕ ಈ ಆದೇಶ ಹೊರಡಿಸಲಾಗಿದೆ.
ದೇಶದಲ್ಲಿ ಈ ಕಂಪನಿಗಳಿಗೆ ಔಷಧ ತಯಾರಿಕೆಗೆ ಅನುಮತಿ ಸಿಕ್ಕಿದೆ :
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಬಳಸುವ ಪ್ರಮುಖ ಮೂರು ಔಷಧಗಳಾದ ರೆಮ್ಡೆಸಿವಿರ್, ಫಾವಿಪಿರವಿರ್ ಮತ್ತು ಟೋಸಿಲಿಜುಮಾಬ್ ಉತ್ಪಾದಿಸಲು ಸರ್ಕಾರ ಸದ್ಯ ಹೆಟ್ರೊಲಾಬ್ಸ್ , ಸಿಪ್ಲಾ ಮತ್ತು ಮಿಲನ್ ಈ ಮೂರು ಕಂಪನಿಗಳಿಗೆ ಮಾತ್ರ ಅನುಮತಿ ನೀಡಿದೆ.
ಕಾಳ ದಂಧೆಯ ಬಗ್ಗೆ ಮೇಲ್ವಿಚಾರಣೆಗೆ ಆದೇಶ:
ಈ ಮೂರು ಔಷಧಗಳ ಕಾಳ ದಂಧೆಯನ್ನು ತಕ್ಷಣದಿಂದ ತಡೆಯಲು ಕ್ರಮಕೈಗೊಳ್ಳಲಾಗಿದ್ದು, ಈ ಬಗ್ಗೆ ಮೇಲ್ವಿಚಾರಣೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಡ್ರಗ್ ಕಂಟ್ರೋಲರ್ ಆದೇಶ ಹೊರಡಿಸಿದ್ದಾರೆ.
ವೈದ್ಯರು ಲಿಖಿತ ರೂಪದಲ್ಲಿ ಬರೆದು ಕೊಟ್ಟರೆ ಮಾತ್ರ ಮಾರಾಟ ಮಾಡಬಹುದು:
ಕೊರೊನಾ ಚಿಕಿತ್ಸೆಗೆ ಬಳಸುವ ಔಷಧಗಳನ್ನು ಮಾರಾಟ ಮಾಡಬೇಕಾದರೆ ವೈದ್ಯರು ಲಿಖಿತವಾಗಿ ಬರೆದುಕೊಟ್ಟ ಚೀಟಿ ಕಡ್ಡಾಯವಾಗಿ ತೋರಿಸಬೇಕು. ಇನ್ನು ಮೂರು ಔಷಧಗಳ ಪೈಕಿ ರೆಮ್ಡೆಸಿವಿರ್ ಮಾರಾಟ ಮಾಡಬೇಕಾದರೆ ಆಸ್ಪತ್ರೆಗಳ ಕೋರಿಕೆ ಬೇಕು. ಮೂರು ಔಷಧಗಳನ್ನು ರೋಗಿಗಳು ಇರುವ ಸ್ಥಳಗಳಿಗೆ ತಲುಪಿಸಬೇಕು. ಎಲ್ಲೆಂದರಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.
ದೆಹಲಿಯಲ್ಲಿ ಕೊರೊನಾ ಚಿಕಿತ್ಸೆಗೆ ನಿಖರವಾದ ಯಾವುದೇ ಲಸಿಕೆ ಲಭ್ಯವಿಲ್ಲ. ಆದರೆ, ಸದ್ಯ ಬಳಸಲಾಗುತ್ತಿರುವ ಔಷಧಗಳನ್ನು ಅಕ್ರಮವಾಗಿ ಸ್ಯಾನಿಟೈಸರ್ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದ ಬಳಿಕ ದೆಹಲಿ ಸರ್ಕಾರ ಈ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.